alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಳ್ಳಿಯಲ್ಲಿ ಪುರುಷ – ಸ್ತ್ರೀಯರು ಮಾತನಾಡುವುದು ಬೇರೆ ಬೇರೆ ಭಾಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಳ್ಳಿಯಲ್ಲಿ ಪುರುಷ – ಸ್ತ್ರೀಯರು ಮಾತನಾಡುವುದು ಬೇರೆ ಬೇರೆ ಭಾಷೆ…!

ವಿಶ್ವದಲ್ಲಿ ಒಟ್ಟು 6,500 ಭಾಷೆಗಳು ಅಸ್ತಿತ್ವದಲ್ಲಿದೆ ಎಂದು ಹೇಳಲಾಗಿದೆ. ಪ್ರತಿಯೊಂದು ದೇಶ, ಪ್ರಾಂತ್ಯದಲ್ಲಿ ಬೇರೆ-ಬೇರೆ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ.

ಹಾಗೆಯೇ ದಕ್ಷಿಣ ನೈಜೀರಿಯಾದಲ್ಲೂ ಕೂಡ ಅವರ ಭಾಷೆ ಮಾತನಾಡುತ್ತಾರೆ. ಇದರಲ್ಲೇನು ವ್ಯತ್ಯಾಸ ಅಂತೀರಾ..? ಆದರೆ ಇಲ್ಲಿ ಪುರುಷರು ಹಾಗೂ ಮಹಿಳೆಯರು ಬೇರೆ-ಬೇರೆ ಭಾಷೆ ಮಾತನಾಡುತ್ತಾರೆ.

ಹೌದು, ದಕ್ಷಿಣ ನೈಜೀರಿಯಾದ ಹಳ್ಳಿಯಲ್ಲಿ ಪುರುಷರು ಹಾಗೂ ಮಹಿಳೆಯರು ಬೇರೆ-ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಉಬಾಂಗ್ ನ ರೈತ ಸಮುದಾಯದ ಪುರುಷರು ಹಾಗೂ ಮಹಿಳೆಯರು ಬೇರೆ-ಬೇರೆ ಭಾಷೆಗಳನ್ನು ಮಾತನಾಡುವುದು ದೇವರ ಆಶೀರ್ವಾದ ಎಂದು ಭಾವಿಸುತ್ತಾರೆ.

ಆದರೆ, ಸಮುದಾಯವು ಮಾತನಾಡುವ ಪುರುಷ ಹಾಗೂ ಸ್ತ್ರೀ ಭಾಷೆಗಳಲ್ಲಿ ಯಾವ ಪ್ರಮಾಣದ ಪದಗಳು ವಿಭಿನ್ನವಾಗಿವೆ ಎಂಬುದು ಸ್ಪಷ್ಟವಾಗಿಲ್ಲ. ಇನ್ನು “ಪುರುಷರು ಹಾಗೂ ಮಹಿಳೆಯರು ಸಾಮಾನ್ಯವಾಗಿ ಹಂಚಿಕೊಳ್ಳುವ ಬಹಳಷ್ಟು ಪದಗಳಿವೆ. ಅವರು ಒಂದೇ ರೀತಿಯ ಪದಗಳನ್ನು ಮಾತನಾಡುವುದಿಲ್ಲ, ಮಾತನಾಡುವ ಪದಗಳು ಒಂದೇ ಅಕ್ಷರಗಳನ್ನು ಹೊಂದಿಲ್ಲ. ಅವುಗಳು ಸಂಪೂರ್ಣವಾಗಿ ವಿಭಿನ್ನ ಪದಗಳಾಗಿವೆ” ಎಂದು ಸಮುದಾಯವನ್ನು ಅಧ್ಯಯನ ಮಾಡಿದ ಮಾನವ ಶಾಸ್ತ್ರಜ್ಞರುಡಿ ತಿಳಿಸಿದ್ದಾರೆ.

BIG NEWS: ರಾಜ್ಯದಲ್ಲಿಂದು 1220 ಜನರಿಗೆ ಸೋಂಕು, ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಇನ್ನು ಇದರಲ್ಲಿ ಕುತೂಹಲಕಾರಿ ಅಂಶವೆಂದರೆ, ಪುರುಷರು ಹಾಗೂ ಮಹಿಳೆಯರು ಪರಸ್ಪರ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ ಬಾಲ್ಯದಲ್ಲಿ ಗಂಡುಮಕ್ಕಳು ತಮ್ಮ ತಾಯಂದಿರ ಜೊತೆ ಬೆಳೆಯುವುದರಿಂದ ಹೆಣ್ಣುಮಕ್ಕಳು ಮಾತನಾಡುವ ಭಾಷೆ ಮಾತನಾಡುತ್ತಾರೆ. ಆದರೆ ತಮಗೆ 10 ವರ್ಷ ತುಂಬುತ್ತಿದ್ದಂತೆ ಪುರುಷ ಭಾಷೆ ಮಾತನಾಡುತ್ತಾರೆ ಎಂದು ಹೇಳಲಾಗಿದೆ.

ಇನ್ನು ಈ ಭಾಷೆಗಳಿಗೆ ನಿರ್ದಿಷ್ಟ ಲಿಪಿ ಇಲ್ಲ ಎಂದು ಹೇಳಲಾಗಿದೆ. ಉಬಂಡ್ ಭಾಷೆಗಳನ್ನು ಶಾಲೆಗಳಲ್ಲಿ ಪಠ್ಯ ರೂಪದಲ್ಲಿ ಅಧ್ಯಯನ ಮಾಡುವುದಿಲ್ಲ. ಹೀಗಾಗಿ ಸಮುದಾಯದ ಭಾಷೆಯನ್ನು ಸಂರಕ್ಷಿಸಲು ಪ್ರಯತ್ನ ಮಾಡಬೇಕಿದೆ ಎಂದು ಹಲವರು ನಂಬುತ್ತಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...