alex Certify ನೆಟ್ಟಿಗರನ್ನು 90ರ ದಶಕದ ಬಾಲ್ಯಕ್ಕೆ ಕರೆದೊಯ್ದ ಹುಟ್ಟುಹಬ್ಬದ ತಿಂಡಿ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು 90ರ ದಶಕದ ಬಾಲ್ಯಕ್ಕೆ ಕರೆದೊಯ್ದ ಹುಟ್ಟುಹಬ್ಬದ ತಿಂಡಿ ಫೋಟೋ

90ರ ದಶಕದ ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳೆಲ್ಲಾ ಒಂಥರಾ ಸಖತ್‌ ನೆನಪುಗಳಾಗಿಬಿಟ್ಟಿವೆ. ಶಾಲಾ ಮಕ್ಕಳು ತಮ್ಮ ಮೆಚ್ಚಿನ ಧಿರಿಸಿನಲ್ಲಿ ಕಂಗೊಳಿಸಿ ಪಾರ್ಟಿಗಳಿಗೆ ತೆರಳಿ ಇಷ್ಟ ಬಂದ ಸ್ನ್ಯಾಕ್‌ಗಳನ್ನು ಮೆಲ್ಲುವುದೇ ಆ ದಶಕದ ಹುಟ್ಟುಹಬ್ಬಗಳ ವಿಶೇಷ.

ಅಂದಿನ ದಿನಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ತಟ್ಟೆಯಲ್ಲಿ ಕೊಡುತ್ತಿದ್ದ ಖಾದ್ಯಗಳ ಫೋಟೋವೊಂದನ್ನು ಟ್ವಿಟರ್‌ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಫ್ಲಾಶ್‌ಬ್ಯಾಕ್ ಮೋಡ್‌ಗೆ ನೆಟ್ಟಿಗರನ್ನು ಕೊಂಡೊಯ್ದಿದ್ದಾರೆ.

ಚಿತ್ರದಲ್ಲಿರುವ ಪ್ಲೇಟ್‌ನಲ್ಲಿ ಸಮೋಸಾ, ಆಲೂಗಡ್ಡೆ ಚಿಪ್ಸ್‌, ಬ್ಲ್ಯಾಕ್ ಫಾರೆಸ್ಟ್ ಕೇಕ್ ಮತ್ತು ನೆಸ್ಲೆ ಮಂಚ್‌ ಚಾಕೊಲೇಟ್‌ಗಳಿದ್ದು ನಮ್ಮದೇ ಬಾಲ್ಯದ ದಿನಗಳ ಸಂಭ್ರಮವನ್ನು ನೆನಪಿಸುತ್ತಿವೆ.

— Ashish ? (@ipurpleBTSis7) May 27, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...