alex Certify BIG NEWS: ಕೇಂದ್ರ ಸರ್ಕಾರದ ಸೂಚನೆಗೂ ನಿರ್ಲಕ್ಷ…! ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಗೆ ಎದುರಾಯ್ತು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇಂದ್ರ ಸರ್ಕಾರದ ಸೂಚನೆಗೂ ನಿರ್ಲಕ್ಷ…! ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಗೆ ಎದುರಾಯ್ತು ಸಂಕಷ್ಟ

ರಾಷ್ಟ್ರ ವಿರೋಧಿ ಚಟುವಟಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಟ್ವೀಟರ್ ಮಧ್ಯೆ ಜಿದ್ದಾಜಿದ್ದಿ ಮುಂದುವರೆದಿದೆ. ಈಗ ಟ್ವೀಟರ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ತಯಾರಿಯಲ್ಲಿದೆ.

ಟ್ವೀಟರ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಅದರ ಅನೇಕ ಸಂಸ್ಥೆಗಳು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಬದಲು ಮೇಡ್-ಇನ್-ಇಂಡಿಯಾ ಪ್ಲಾಟ್‌ಫಾರ್ಮ್ `ಕೂ’ ಕಡೆಗೆ ತಿರುಗಿವೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಮೈಗೋವ್, ಡಿಜಿಟಲ್ ಇಂಡಿಯಾ, ಇಂಡಿಯಾ ಪೋಸ್ಟ್, ಎನ್ಐಸಿ, ನೀಲಿಟ್, ಸಮೀರ್, ಉಮಾಂಗ್ ಆಪ್, ಡಿಜಿ ಲಾಕರ್, ನಿಕ್ಸಿ, ಎಸ್‌ಟಿಪಿಐ, ಸಿಡಿಎಸಿ ಮತ್ತು ಸಿಎಮ್‌ಇಟಿ ಕೂ ನಲ್ಲಿ ತಮ್ಮ ಖಾತೆಗಳನ್ನು ರಚಿಸಿವೆ.

ಖಲಿಸ್ತಾನಿ ಹಾಗೂ ಭಾರತ ವಿರೋಧಿ ಅಕೌಂಟ್ ತೆಗೆದುಹಾಕುವ ಆದೇಶವನ್ನು ಟ್ವೀಟರ್ ಉಲ್ಲಂಘಿಸಿದ್ದಕ್ಕಾಗಿ ಟ್ವೀಟರ್ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಿದೆ. ಖಲಿಸ್ತಾನಿ ಪರ, ಪಾಕಿಸ್ತಾನಿ ಪರ ಇರುವ ಖಾತೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.

ಆದ್ರೆ ಟ್ವೀಟರ್ ಈ ಆದೇಶವನ್ನು ಉಲ್ಲಂಘಿಸಿದೆ. ಈವರೆಗೂ ಟ್ವೀಟರ್ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿಲ್ಲ. ಭಾರತದಲ್ಲಿ ಎಲ್ಲ ಕಂಪನಿಗಳಿಗೆ ಸರ್ಕಾರದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸ್ವತಂತ್ರವಿದೆ. ಟ್ವೀಟರ್ ನ ಎಲ್ಲ ಬೆಳವಣಿಗೆಗಳನ್ನು ಪರಿಶೀಲಿಸಿದ್ರೆ ಟ್ವೀಟರ್, ರಾಷ್ಟ್ರೀಯ ಹಿತಾಸಕ್ತಿಗೆ ದಕ್ಕೆ ತರುವ ಕೆಲಸ ಮಾಡುವವರನ್ನು ನಿರ್ಬಂಧಿಸದೆ ಪ್ರೋತ್ಸಾಹ ನೀಡ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...