alex Certify ಕಡುಬಡತನದಲ್ಲೂ ಛಲ ಬಿಡದೆ ಐಎಎಸ್‌ ಪಾಸ್;‌ ಇಲ್ಲಿದೆ ಎಲ್ಲರಿಗೂ ಸ್ಪೂರ್ತಿಯಾಗುವ ಯುವಕನ ಯಶೋಗಾಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡುಬಡತನದಲ್ಲೂ ಛಲ ಬಿಡದೆ ಐಎಎಸ್‌ ಪಾಸ್;‌ ಇಲ್ಲಿದೆ ಎಲ್ಲರಿಗೂ ಸ್ಪೂರ್ತಿಯಾಗುವ ಯುವಕನ ಯಶೋಗಾಥೆ

ಐಎಎಸ್​, ಐಪಿಎಸ್​, ಐಆರ್​ಎಸ್​ ಸೇವೆ ಸಲ್ಲಿಸಬೇಕೆಂದು ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಯುವಕರು ಆಸೆಹೊತ್ತು ಪ್ರಯತ್ನ ನಡೆಸುತ್ತಾರೆ. ಬಹಳಷ್ಟು ಜನರು ತಮ್ಮ ಕನಸುಗಳನ್ನು ನನಸಾಗಿಸುವ ಸೂಕ್ತ ಸವಲತ್ತು ಹೊಂದಿಲ್ಲದ ಕಾರಣ ಆಸೆಗಳನ್ನು ಬಿಟ್ಟುಬಿಡಬೇಕಾಗುತ್ತದೆ.

ಯುಪಿಎಸ್ಸಿ ಪರೀಕ್ಷೆಗೆ ಕೋಚಿಂಗ್​ ಬಹಳ ಮುಖ್ಯ ಎಂಬುದು ಹಿಂದಿನಿಂದಲೂ ಅಭಿಪ್ರಾಯವಿದೆ. ಆದರೆ, ಇಲ್ಲೊಬ್ಬರು ಕೋಚಿಂಗ್​ ಇಲ್ಲದೇ ತಮ್ಮ ಸ್ವಂತ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಗಮನ ಸೆಳೆದಿದ್ದಾರೆ.

ಉತ್ತರಾಖಂಡದ ಸಿತಾರ್​ಗಂಜ್​ ಜಿಲ್ಲೆಯ ಐಎಎಸ್​ ಅಧಿಕಾರಿ ಹಿಮಾಂಶು ಗುಪ್ತಾ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಏಕೆಂದರೆ ಅವರು ಬಡತನ ಮತ್ತು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದರೂ, ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸಿ ಯಶಸ್ವಿಯಾಗಿದ್ದಾರೆ.

ಉತ್ತರಾಖಂಡದ ಸಿತಾರ್​ಗಂಜ್​ ಜಿಲ್ಲೆಯವರಾದ ಹಿಮಾಂಶು ಗುಪ್ತಾ ಬಾಲ್ಯದಿಂದಲೂ ಬುದ್ಧಿವಂತರಾಗಿದ್ದರು. ಅವರ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಅವರ ತಂದೆ ದಿನಗೂಲಿ ಕೆಲಸಗಾರರಾಗಿದ್ದರು. ಅವರು ತರುತ್ತಿದ್ದ ಆದಾಯ ಕುಟುಂಬದ ಅಗತ್ಯಗಳಿಗೆ ಸಾಕಾಗುತ್ತಿರಲಿಲ್ಲ. ಹಿಮಾಂಶುವಿನ ತಂದೆ ಟೀ ಸ್ಟಾಲ್​ ಅನ್ನು ಪ್ರಾರಂಭಿಸಲು ನಿರ್ಧರಿಸಿದರು, ಅಲ್ಲಿ ಹಿಮಾಂಶು ತನ್ನ ಶಾಲಾ ಸಮಯದ ನಂತರ ಟೀ ಸ್ಟಾಲ್​ನಲ್ಲಿ ತನ್ನ ತಂದೆಗೆ ಸಹಾಯ ಮಾಡುತ್ತಿದ್ದರು.

ಮುಂದೆ ಅವರ ಅಜ್ಜಿ ವಾಸಿಸುತ್ತಿದ್ದ ಬರೇಲಿಯ ಶಿವಪುರಿಗೆ ಸ್ಥಳಾಂತರಗೊಂಡರು, ಅಲ್ಲಿನ ಸ್ಥಳಿಯ ಸರ್ಕಾರಿ ಶಾಲೆಗೆ ಸೇರಿಸಲಾಯಿತು. ಹಿಮಾಂಶು ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜಿಗೆ ಪ್ರವೇಶ ಪಡೆದರು ಮತ್ತು ಟ್ಯೂಷನ್​ ತೆಗೆದುಕೊಂಡು ಬ್ಲಾಗ್​ ಬರೆಯುವ ಮೂಲಕ ತಮ್ಮ ಶುಲ್ಕವನ್ನು ಪಾವತಿಸಿದರು. ಇಂಗ್ಲಿಷ್​ ಶಿಕ್ಷಣಕ್ಕಾಗಿ ಪ್ರತಿದಿನ 70 ಕಿಮೀ ಪ್ರಯಾಣಿಸಬೇಕಾಗಿತ್ತು.

ಮುಂದೆ ಅವರು ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರಲ್ಲದೇ ಬ್ಯಾಚ್​ನಲ್ಲಿ ಅಗ್ರಸ್ಥಾನ ಪಡೆದರು. ವಿದೇಶದಲ್ಲಿ ಪಿಎಚ್​ಡಿ ಮಾಡಲು ಆಯ್ಕೆಯನ್ನು ಹೊಂದಿದ್ದರೂ ಭಾರತದಲ್ಲಿ ಉಳಿಯಲು ತೀರ್ಮಾನಿಸಿ ಯುಪಿಎಸ್ಸಿಗೆ ಪ್ರಯತ್ನ ಆರಂಭಿಸಿದರು.

ಈ ನಡುವೆ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಹಿಮಾಂಶು ಸರ್ಕಾರಿ ಕಾಲೇಜಿನಲ್ಲಿ ಸಂಶೋಧನಾ ವಿದ್ಯಾಥಿರ್ಯಾಗಿ ಸೇರಿಕೊಂಡರು.

ಮೂರು ಬಾರಿ ಯುಪಿಎಸ್ಸಿ ಸಿವಿಲ್​ ಸರ್ವೀಸಸ್​ ಪರೀಕ್ಷೆಗೆ ಪ್ರಯತ್ನಿಸಿದ್ದು, ಮೊದಲ ಪ್ರಯತ್ನದಲ್ಲಿ ಅರ್ಹತೆ ಪಡೆದರೂ ಐಆರ್​ಟಿಸಿಗೆ ಆಯ್ಕೆಯಾದರು. ಅವರು ತಮ್ಮ ತಯಾರಿಯನ್ನು ಮುಂದುವರೆಸಿದ್ದು ಮತ್ತು 2019ರಲ್ಲಿ ಐಪಿಎಸ್​ಗೆ ಆಯ್ಕೆಯಾಗಲು ಸಾಧ್ಯವಾಯಿತು. ಆದರೆ, ಮೂರನೇ ಬಾರಿ ಐಎಎಸ್​ಗೆ ಅರ್ಹತೆ ಪಡೆದುಕೊಂಡರು. ಅವರ ಈ ಕಠಿಣ ಪರಿಶ್ರಮ ಮತ್ತು ಎಂದಿಗೂ ಬಿಟ್ಟುಕೊಡದ ಮನೋಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ. ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ ಅವರು ಕೋಚಿಂಗ್ ಪಡೆದಿಲ್ಲ. ಸ್ವಂತ ಪರಿಶ್ರಮವೇ ಅವರನ್ನು ಗುರಿ ಮುಟ್ಟಿಸಿದೆ.

IAS Himanshu Gupta

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...