alex Certify ಈ ನಾಯಿ ನೋಡಿದ್ರೆ ನೀವೂ ಗೊಂದಲಕ್ಕೊಳಗಾಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಾಯಿ ನೋಡಿದ್ರೆ ನೀವೂ ಗೊಂದಲಕ್ಕೊಳಗಾಗ್ತೀರಾ….!

ನಾಯಿ ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಮನುಷ್ಯನಿಗಿಂತ ಅತಿ ನಂಬಿಕಸ್ಥ ಪ್ರಾಣಿ ಅಂದ್ರೆ ಅದು ನಾಯಿ ಮಾತ್ರ. ತನ್ನ ಯಜಮಾನನಿಗೆ ಪ್ರಾಣ ಕೊಡುವುದಕ್ಕೂ ಹಿಂಜರಿಯಲ್ಲ ನಾಯಿಗಳು. ಅಂದ ಹಾಗೆ ಈ ನಾಯಿಗಳ ಉದ್ದ ಸಾಮಾನ್ಯವಾಗಿ 15 ರಿಂದ 110 ಸೆಂ.ಮೀ ಇರುತ್ತದೆ. ಆದ್ರೆ ಇಲ್ಲೊಂದು ನಾಯಿ ನೋಡಿದ್ರೆ ನೀವು ಗೊಂದಲಕ್ಕೊಳಗಾಗೋದು ಪಕ್ಕಾ.. ಅರೆ ಏನಪ್ಪಾ ನಾಯಿ ಕಥೆ ಅಂತೀರಾ..? ಹಾಗಿದ್ರೆ ಮುಂದೆ ಓದಿ..

ಹೌದು, ಇಲ್ಲೊಂದೆಡೆ ಇದೆ ಉದ್ದನೆಯ ನಾಯಿ. ಈ ಹೆಣ್ಣು ನಾಯಿ ತನ್ನ ಹಿಂಗಾಲುಗಳ ಮೇಲೆ ನಿಂತಿರುವ ಫೋಟೋ ನೋಡಿದ ಜನ ಒಂದು ಕ್ಷಣ ಶಾಕ್ ಗೆ ಒಳಗಾಗಿದ್ದಾರೆ. ಇದೇನು ನಾಯಿಯೋ ಇಲ್ಲ ಜಿರಾಫೆಯೋ..? ಅಂತಾ ಕನ್ಫ್ಯೂಸ್ ಮಾಡಿಕೊಂಡಿದ್ದಾರೆ. ಬಿಳಿ ಮತ್ತು ಕಂದು ಬಣ್ಣ ಹೊಂದಿರುವ ಈ ನಾಯಿಯು ಬರೋಬ್ಬರಿ 5 ಅಡಿ 7 ಇಂಚು ಎತ್ತರವಿದೆ.

ಇನ್ನು ನಾಯಿಯು ಎತ್ತರವಿರುವುದರಿಂದ ಮನೆ ಮಾಲೀಕರು ಮನೆಯ ಗೇಟ್ ನ್ನು ಎತ್ತರಕ್ಕೇರಿಸಿದ್ದಾರೆ. ಹೀಗಾಗಿ ನಾಯಿಯು ಕಾಂಪೌಂಡ್ ಹೊರಗಡೆ ಜಿಗಿಯಲು ಪ್ರಯತ್ನಿಸುವುದಿಲ್ಲವಂತೆ. ಸದ್ಯ ಈ ಉದ್ದದ ನಾಯಿಯ ಫೋಟೋವನ್ನು ಮಾಲಿಕ ಇರಿಸ್ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ತನ್ನ ಮನೆ ಮಾಲೀಕರೊಂದಿಗೆ ಆಟವಾಡುವ ದೃಶ್ಯಗಳು ನೆಟ್ಟಿಗರ ಮನಗೆದ್ದಿದೆ.

ಉದ್ದನೆಯ ನಾಯಿಯ ಫೋಟೋ ನೋಡಿದ ನೆಟ್ಟಿಗರಂತೂ ಸಿಕ್ಕಾಪಟ್ಟೆ ತಮಾಷೆಯ ಮಾತುಗಳನ್ನಾಡಿದ್ದಾರೆ. ಒಬ್ಬರು ಅದು ನಾಯಿಯಲ್ಲ ಜಿರಾಫೆ ಅಂದಿದ್ದರೆ ಮತ್ತೊಬ್ಬಾತ ‘ಎಂತಹ ಅತೀಂದ್ರಿಯ ಜೀವಿ ಇದು, ನಾನಿದನ್ನು ಪ್ರೀತಿಸುತ್ತೇನೆ’ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...