alex Certify ಅಬ್ಬಬ್ಬಾ…! ಬೆರಗಾಗಿಸುವಂತಿದೆ ಈ ನಟರ ʼಅಂಗರಕ್ಷಕರುʼ ಗಳ ಸಂಭಾವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ಬೆರಗಾಗಿಸುವಂತಿದೆ ಈ ನಟರ ʼಅಂಗರಕ್ಷಕರುʼ ಗಳ ಸಂಭಾವನೆ

ಖ್ಯಾತ ಸಿನಿಮಾ ತಾರೆಗಳು ಇಂದು ತಮ್ಮ ರಕ್ಷಣೆಗೆ ಬಾಡಿಗಾರ್ಡ್ ಗಳ ಮೊರೆಹೋಗಿದ್ದಾರೆ. ಎ-ಲಿಸ್ಟ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಣೆ, ಇತರರು ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹೆಚ್ಚಿನ ಜಾಗರೂಕತೆ ವಹಿಸುತ್ತಾರೆ. ಹೀಗಾಗಿ ಇವರು ತಮ್ಮ ರಕ್ಷಣೆಗೆ ಮತ್ತು ಯಾರೂ ಅನುಚಿತವಾಗಿ ವರ್ತಿಸದಂತೆ ತಡೆಯಲು ಸಾಮಾನ್ಯವಾಗಿ ತಮ್ಮ ಅಂಗರಕ್ಷಕರೊಂದಿಗೆ ಹೊರಗಡೆ ಕಾಣಿಸಿಕೊಳ್ಳುತ್ತಾರೆ.

ಸೆಲಬ್ರಿಟಿಗಳಿಗೆ ಸುರಕ್ಷತೆಯನ್ನು ಒದಗಿಸಲು ನೇಮಕಗೊಳ್ಳುವ ಇಂತಹ ಬಾಡಿಗಾರ್ಡ್ ಗಳು ಉತ್ತಮ ಹಣವನ್ನು ಪಡೆಯುತ್ತಾರೆ. ಹಾಗಾದರೆ ಬಾಲಿವುಡ್ ನಲ್ಲಿನ ಟಾಪ್ ಸೆಲಬ್ರಿಟಿಗಳಲ್ಲಿ ಯಾರ ಅಂಗರಕ್ಷಕರು ಅತಿಹೆಚ್ಚು ಸಂಭಾವನೆ ಪಡೆಯುತ್ತಾರೆ ಅಂತ ನೋಡಿದ್ರೆ ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಅಂಗರಕ್ಷಕ ರವಿ ಸಿಂಗ್ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿ ಅಂಗರಕ್ಷಕರಾಗಿದ್ದಾರೆ. ವರದಿಗಳ ಪ್ರಕಾರ SRK ಅವರ ಅಂಗರಕ್ಷಕ ವಾರ್ಷಿಕವಾಗಿ ಸುಮಾರು 2.7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ಸೆಲೆಬ್ರಿಟಿಗಿಂತ ಕಡಿಮೆಯಿಲ್ಲ. ಸುಮಾರು 29 ವರ್ಷಗಳಿಂದ ಸಲ್ಮಾನ್ ಜೊತೆ ಇರುವ ಶೇರಾ ವಾರ್ಷಿಕ ಸುಮಾರು 2 ಕೋಟಿ ರೂ. ಗಳಿಸುತ್ತಾನೆ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅವರ ಅಂಗರಕ್ಷಕ ಶ್ರೇಯ್ಸೆ ಥೇಲೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ಯಾವುದೇ ಅಪಾಯದಿಂದ ಅಕ್ಷಯ್ ಕುಮಾರ್ ಸೇರಿದಂತೆ ಅವರ ಮಗ ಆರವ್ ನನ್ನು ರಕ್ಷಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ ಅಕ್ಷಯ್ ಕುಮಾರ್ ತನ್ನ ಅಂಗರಕ್ಷಕನಿಗೆ ವಾರ್ಷಿಕವಾಗಿ 1.2 ಕೋಟಿ ರೂ. ನೀಡುತ್ತಾರೆ

ಅಮಿತಾಬ್ ಬಚ್ಚನ್

ಅಮಿತಾಭ್ ಬಚ್ಚನ್ ಅವರ ಅಂಗರಕ್ಷಕ ಜಿತೇಂದ್ರ ಶಿಂಧೆ ಆಗಸ್ಟ್ 2021 ರವರೆಗೆ ಅವರಿಗೆ ಬಾಡಿಗಾರ್ಡ್ ಆಗಿದ್ದರು. ಮುಂಬೈ ಪೊಲೀಸ್ ಪೇದೆಯಾಗಿದ್ದ ಜಿತೇಂದ್ರ ಶಿಂಧೆ ಅವರು ವಾರ್ಷಿಕವಾಗಿ 1.5 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದರು ಎಂದು ವರದಿಯಾಗಿದೆ.

ಅಮೀರ್ ಖಾನ್

ಅಮೀರ್ ಖಾನ್ ಯಾವಾಗಲೂ ತನ್ನ ನಂಬಿಕಸ್ಥ ಅಂಗರಕ್ಷಕ ಯುವರಾಜ್ ಘೋರ್ಪಡೆಯ ಜೊತೆಯಿರುತ್ತಾರೆ. ವರದಿಗಳ ಪ್ರಕಾರ ಅವರ ವಾರ್ಷಿಕ ವೇತನ ವಾರ್ಷಿಕ 2 ಕೋಟಿ ರೂ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಯಾವಾಗಲೂ ತಮ್ಮ ವೈಯಕ್ತಿಕ ಅಂಗರಕ್ಷಕ ಜಲಾಲ್ ಅವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಜಲಾಲ್ ಅವರ ವಾರ್ಷಿಕ ವೇತನ ವಾರ್ಷಿಕವಾಗಿ 1.2 ಕೋಟಿ ರೂ.

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಅವರ ಅಂಗರಕ್ಷಕ ಪ್ರಕಾಶ್ ಸಿಂಗ್ (ಸೋನು) ವಿರಾಟ್ ಕೊಹ್ಲಿ ಮತ್ತು ಅವರ ಮಗಳು ವಾಮಿಕಾ ಅವರ ಭದ್ರತೆಯ ಜವಾಬ್ದಾರಿಯನ್ನ ಸಹ ನೋಡಿಕೊಳ್ಳುತ್ತಾರೆ. ವರದಿಯ ಪ್ರಕಾರ ಸೋನು ವರ್ಷಕ್ಕೆ 1.2 ಕೋಟಿ ಗಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...