alex Certify BIG NEWS: ನಾಲೆಗೆ ಈಜಲು ಹೋದಾಗ ದುರಂತ; ವೈದ್ಯಕೀಯ ವಿದ್ಯಾರ್ಥಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಲೆಗೆ ಈಜಲು ಹೋದಾಗ ದುರಂತ; ವೈದ್ಯಕೀಯ ವಿದ್ಯಾರ್ಥಿ ದುರ್ಮರಣ

ಮೈಸೂರು: ನಾಲೆಯಲ್ಲಿ ಈಜಲು ಹೋದ ವೈದ್ಯಕೀಯ ವಿದ್ಯಾರ್ಥಿ ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು ಮೂಲದ ಕಿಶನ್ (21) ಮೃತ ವಿದ್ಯಾರ್ಥಿ. ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್ ಓದುತ್ತಿದ್ದ. ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಆಗಮಿಸಿದ್ದ. ಈ ವೇಳೆ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದಾನೆ.

ಕಿಶನ್ ಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ. ಆದರೂ ನೀರಿಗಿಳಿದಿದ್ದ. ನಾಲೆಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...