alex Certify VIRAL VIDEO | ಕರೆಯದೆ ಮದುವೆ ಮನೆಗೆ ಹೋಗಿ ಊಟ; ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIRAL VIDEO | ಕರೆಯದೆ ಮದುವೆ ಮನೆಗೆ ಹೋಗಿ ಊಟ; ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ…!

ಪರಸ್ಥಳಗಳಲ್ಲಿ ವ್ಯಾಸಂಗ ಮಾಡುವ ಕೆಲವು ವಿದ್ಯಾರ್ಥಿಗಳು ಅನಿವಾರ್ಯ ಸಂದರ್ಭಗಳಲ್ಲಿ ಯಾವುದಾದರೂ ಸಮಾರಂಭ ನಡೆಯುತ್ತಿದ್ದರೆ ಅಲ್ಲಿಗೆ ಹೋಗಿ ಊಟ ಮಾಡುವುದು ಸಾಮಾನ್ಯ ಸಂಗತಿ. ಅಮೀರ್ ಖಾನ್ ಅಭಿನಯದ ಸೂಪರ್ ಹಿಟ್ ಚಲನಚಿತ್ರ ‘ತ್ರೀ ಈಡಿಯಟ್ಸ್’ ನಲ್ಲೂ ಇಂಥದೊಂದು ದೃಶ್ಯವಿದೆ. ಅಂತಹ ಸಂದರ್ಭಗಳಲ್ಲಿ ತಿಳಿದರೂ ಸಹ ಯಾರೂ ಕೂಡ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ.

ಆದರೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿರುವ ಘಟನೆಯೊಂದು ಮಾನವೀಯತೆ ಉಳ್ಳವರು ತಲೆತಗ್ಗಿಸುವಂತೆ ಮಾಡಿದೆ. ಎಂಬಿಎ ವಿದ್ಯಾರ್ಥಿಯೊಬ್ಬ ಕರೆಯದೆ ಬಂದು ಮದುವೆ ಮನೆಯಲ್ಲಿ ಊಟ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಆತನನ್ನು ಹಿಡಿದು ಪಾತ್ರೆ ತೊಳೆಸಲಾಗಿದೆ. ಅಷ್ಟೇ ಅಲ್ಲ ಇದರ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.

ಜಬಲ್ಪುರ ಮೂಲದ ಈ ವಿದ್ಯಾರ್ಥಿ ಭೋಪಾಲ್ ನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಸಮೀಪದಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಹೋಗಿ ಊಟ ಮಾಡಿದ್ದಾನೆ. ಆದರೆ ಈತ ಹೆಣ್ಣಿನ ಅಥವಾ ಗಂಡಿನ ಕುಟುಂಬಕ್ಕೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂಬುದನ್ನು ಕಂಡುಕೊಂಡ ಕೆಲವರು ಆತನನ್ನು ಹಿಡಿದು ಪಾತ್ರೆ ತೊಳೆಯುವ ಶಿಕ್ಷೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಕೊನೆಯಲ್ಲಿ ಆತ, ನಾನು ಈ ಮದುವೆ ಮನೆಯಲ್ಲಿ ಪುಕ್ಕಟೆಯಾಗಿ ಊಟ ಮಾಡಿದೆ. ಅದಕ್ಕಾಗಿ ಏನಾದರೂ ಕೆಲಸ ಮಾಡಬೇಕೆಂಬ ಕಾರಣಕ್ಕೆ ಪಾತ್ರೆ ತೊಳೆದಿದ್ದಾನೆ ಎಂದು ಹೇಳಿದ್ದಾನೆ. ಇದನ್ನು ಕೂಡ ಬಲವಂತವಾಗಿ ಹೇಳಿಸಿದಂತೆ ಕಾಣುತ್ತದೆ. ಇದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೆಣ್ಣು – ಗಂಡಿನ ಕುಟುಂಬಕ್ಕೆ ಛೀಮಾರಿ ಹಾಕುತ್ತಿದ್ದಾರೆ.

— News24 (@news24tvchannel) December 1, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...