alex Certify ಆಸ್ಟ್ರೆಲೀಯಾದ ʼಮಾಸ್ಟರ್ ಶೆಫ್ʼ ಕಾರ್ಯಕ್ರಮದಲ್ಲಿ ಭೇಲ್​ಪುರಿ ತಿಂದು ಚಪ್ಪರಿಸಿದ ತೀರ್ಪುಗಾರರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೆಲೀಯಾದ ʼಮಾಸ್ಟರ್ ಶೆಫ್ʼ ಕಾರ್ಯಕ್ರಮದಲ್ಲಿ ಭೇಲ್​ಪುರಿ ತಿಂದು ಚಪ್ಪರಿಸಿದ ತೀರ್ಪುಗಾರರು…!

ಪಾನಿಪುರಿ, ಭೇಲ್​ಪುರಿ, ಮಸಾಲಾಪುರಿ, ಈ ಚಾಟ್​ಗಳ ಒಂದೊಂದು ಹೆಸರು ಕೇಳ್ತಿದ್ರೆನೆ ಬಾಯಲ್ಲಿ ನೀರು ಬಂದು ಬಿಡುತ್ತೆ. ಸಂಜೆ ಆದ್ರೆ ಸಾಕು ಚಾಟ್ ಅಂಗಡಿಗಳ ಮುಂದೆ ಜನ ಸಾಲು ಸಾಲಾಗಿ ನಿಂತು ಬಾಯಿ ಚಪ್ಪರಿಸಿಕೊಂಡು ತಿನ್ತಾ ಇರ್ತಾರೆ. ಈಗ ಇದೇ ಚಾಟ್​ಗಳಲ್ಲಿ ಒಂದಾದ ಭೇಲ್​ಪುರಿ ವಿದೇಶದಲ್ಲೂ ಫುಲ್ ಫೇಮಸ್ ಆಗಿದೆ.

ಅದು ಆಸ್ಟ್ರೇಲಿಯಾದ ಫೇಮಸ್ ಕಾರ್ಯಕ್ರಮ ಮಾಸ್ಟರ್ ಶೆಫ್. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸಾರಾ ಟೋಡ್ ಅನ್ನೋವರು ಭಾಗವಹಿಸಿದ್ದರು. ಅವರಿಗೆ ಅಲ್ಲಿ ಸಂಜೆ ವೇಳೆ ತಿನ್ನುವಂತಹ ವಿಶೇಷ ತಿಂಡಿ ತಯಾರಿಸುವುದಕ್ಕೆ ಸವಾಲು ಹಾಕಿದ್ದಾರೆ. ಆಗ ಸಾರಾ ಅವರು ಟೇಸ್ಟಿ ಹಾಗೂ ತುಂಬಾ ಸುಲಭವಾಗಿ ತಯಾರಿಸುವಂತ ಭೇಲ್​ಪುರಿಯನ್ನ ತಯಾರಿಸಿದ್ಧಾರೆ. ಅದನ್ನ ಕೊನೆಗೆ ಅಲ್ಲಿನ ತೀರ್ಪುಗಾರರಿಗೆ ಟೇಸ್ಟ್ ನೋಡುವುದಕ್ಕೆ ಕೊಟ್ಟಿದ್ದಾರೆ. ಒಂದೆರಡು ಸ್ಪೂನ್ ಭೇಲ್​ಪುರಿ ತಿಂದಿದ್ದೇ ತಿಂದಿದ್ದು, ಅಲ್ಲಿನ ಜಡ್ಜಸ್ ಫುಲ್ ಖುಷ್ ಆಗಿ ಹೋಗಿದ್ದಾರೆ. ಈಗ ಈ ಸ್ಪೆಷಲ್ ಚಾಟ್​ ಭೇಲ್​ಪುರಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಆಸ್ಟ್ರೇಲಿಯಾದಲ್ಲಿ ಪ್ರಸಾರವಾಗುತ್ತಿರೋ ಮಾಸ್ಟರ್ ಶೆಫ್ 16ನೇ ಸರಣಿಯ ಕಾರ್ಯಕ್ರಮವಾಗಿದೆ. ಇದರಲ್ಲಿ ಭಾಗವಹಿಸಿದ್ದ ಓರ್ವ ಭಾರತೀಯ ಸ್ಪರ್ಧಿ ಹಾಗೂ ಸೆಲೆಬ್ರಿಟಿ ಶೆಫ್ ಸಾರಾ ಇವರಿಬ್ಬರು ಸೇರಿ ಈ ಸ್ವಾದಿಷ್ಟ ಭೇಲ್​ಪುರಿಯನ್ನ ತಯಾರಿಸಿದ್ದರು. ಭಾರತೀಯ ಭಿನ್ನ ಭಿನ್ನವಾಗಿರೋ ವ್ಯಂಜನಗಳನ್ನ ಇಲ್ಲಿ ಭಾಗವಹಿಸಿದ್ದ ಭಾರತೀಯ ಸ್ಪರ್ಧಿಯ ಪ್ರಯತ್ನವಾಗಿತ್ತು. ಅದೇ ಉದ್ದೇಶ ಇಟ್ಟುಕೊಂಡು ತಯಾರಿಸಲಾಗಿದ್ದ ಭೇಲ್​ಪುರಿ ಅಲ್ಲಿದ್ದವರ ಬಾಯಲ್ಲಿ ನೀರೂರಿಸಿ ಬಿಟ್ಟಿತ್ತು. ಸಾರಾ ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಈ ವಿಷಯವನ್ನ ಹಂಚಿಕೊಂಡಿದ್ದಾರೆ. 10 ನಿಮಿಷ ಸ್ವಾದಿಷ್ಟ ವ್ಯಂಜನ ತಯಾರಿಸುವ ಸವಾಲು ಕೊಟ್ಟಾಗ ನನ್ನ ತಲೆಯಲ್ಲಿ ಮೊದಲಿಗೆ ಬಂದಿದ್ದೇ ಈ ಭೇಲ್ಪುರಿ. ಅಂತ ತಾವು ಇನ್ಸ್ಟಾಗ್ರಾಮ್ ಹಾಕಿಕೊಂಡಿರೋ ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.

ಜಾವೇದ್ ಪುತ್ರಿಯನ್ನು ಬೆಂಬಲಿಸಿ ಜೆ.ಎನ್.ಯು. ನಲ್ಲಿ ಪ್ರತಿಭಟನೆ

ಈ ಸುತ್ತಿನಲ್ಲಿ ಭೇಲ್​ಪುರಿಯೇ ತಯಾರಿಸುವುದಕ್ಕೆ ಕಾರಣ ಏನು ಅನ್ನೋದನ್ನ ಅವರು ಪೋಸ್ಟ್​​ಲ್ಲಿ ಹೇಳಿಕೊಂಡಿದ್ದಾರೆ. ಫಫ್ಡ್​ ರೈಸ್​​ (ಕಡ್ಲೆಪುರಿ ಅಥವಾ ಚುರುಮರಿ) ಇದನ್ನ ಮೊದಲು ನೆನಸಿ ಕೊನೆಗೆ ಭೇಲ್​ಪುರಿಯನ್ನ ತಯಾರಿಸಲಾಗುತ್ತೆ. ಆದರೆ ನಾವು ಇಲ್ಲಿ ಆ ರೀತಿ ಮಾಡದೇ ಸ್ವಾದವೂ ಕಡಿಮೆ ಆಗದಂತೆ ನೋಡಿಕೊಂಡು ಭೇಲ್​ಪುರಿಯನ್ನ 10 ನಿಮಿಷದಲ್ಲಿ ತಯಾರಿಸಿದ್ದೇವೆ.

ಕೊಂಚ ಹುಳಿ, ಮಸಾಲೆ ಹಾಕಿ, ಚೂರೇ ಚೂರು ಖಾರ ಹಾಕಿ ನಾವು ಕ್ರಿಸ್ಪಿಯಾಗಿ ಭೇಲ್​ಪುರಿಯನ್ನ ಸಿದ್ಧಪಡಿಸಿದ್ದೇವೆ. ಇದು ಸುಲಭವಾಗಿ ತಯಾರಿಸಬಹುದಾದರೂ, ಆಸ್ಟ್ರೇಲಿಯನ್ರಿಗೆ ಅಷ್ಟು ಇಷ್ಟವಾಗುವುದಿಲ್ಲ. ಇದಕ್ಕೆ ಕಾರಣ ಭಾರತೀಯರಿಗಿಂತ ಭಿನ್ನವಾಗಿರೋ ಅವರ ಆಹಾರ ಪದ್ಧತಿ.

ಸೋಶಿಯಲ್ ಮೀಡಿಯಾದಲ್ಲಿ ಈ ಭೇಲ್​ಪುರಿ ಈಗ ಫುಲ್ ವೈರಲ್ ಆಗ್ತಿದೆ. ಆದರೆ ಆಸ್ಟ್ರೇಲಿಯನ್ನರು ಈ ಭೇಲ್​ಪುರಿ ಕುರಿತು ತಮಾಷೆ ಮಾಡುತ್ತಿದ್ದಾರೆ. ಒಬ್ಬರಂತೂ ವಿಶ್ವಮಟ್ಟದಲ್ಲಿ ಫೇಮಸ್ ಆಗಿರೋ ಮಾಸ್ಟರ್ ಶೆಫ್​​ಲ್ಲಿ20 ರೂಪಾಯಿ ಭೇಲ್​ಪುರಿ ಮಾಡ್ತಿದ್ದಾರೆ. ನಿಜಕ್ಕೂ ಇದು ಆಶ್ಚರ್ಯ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...