alex Certify ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗೆ ತಾಲಿಬಾನ್‌ ಬೆಂಬಲ ಕೋರಿದ ಮಸೂದ್​​​ ಅಝರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗೆ ತಾಲಿಬಾನ್‌ ಬೆಂಬಲ ಕೋರಿದ ಮಸೂದ್​​​ ಅಝರ್

ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್​ ಎ ಮೊಹಮ್ಮದ್​ ಮುಖ್ಯಸ್ಥ ಮಸೂದ್​​​ ಅಝರ್​​​ ತಾಲಿಬಾನ್​​​ ನಾಯಕರನ್ನು ಭೇಟಿಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಬೆಂಬಲ ನೀಡುವಂತೆ ಕೋರಿದ್ದಾನೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ ಕಳೆದ ವಾರ ಕಂದಹಾರ್​ನಲ್ಲಿ ಮಸೂದ್​ ಅಝರ್​​ ತಾಲಿಬಾನ್​ ಹಿರಿಯ ನಾಯಕ ಮುಲ್ಲಾ ಅಬ್ದುಲ್​ ಘನಿ ಬರದಾರ್​ ಸೇರಿದಂತೆ ಅನೇಕರನ್ನು ಭೇಟಿಯಾಗಿದ್ದಾನೆ.

ಅಝರ್​ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚಿಸಲು ತಾಲಿಬಾನಿಗಳ ನೆರವು ಕೋರಿದ್ದಾನೆ ಎನ್ನಲಾಗಿದೆ.

BIG BREAKING: ತಾಕತ್ ತೋರಿಸಿದ ದೊಡ್ಡಣ್ಣ -36 ಗಂಟೆಯಲ್ಲೇ ಉಗ್ರರ ವಿರುದ್ಧ ಸೇಡು -ಐಸಿಸ್ ಮೇಲೆ ಏರ್ ಸ್ಟ್ರೈಕ್

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರ್ಕಾರವನ್ನು ಕೆಡವಿ ಆಗಸ್ಟ್​ 15ರಂದು ಪಾರುಪತ್ಯ ಸಾಧಿಸಿದ ತಾಲಿಬಾನಿಗಳ ಕ್ರಮವನ್ನು ಅಝರ್​ ಪ್ರಶಂಸಿಸಿದ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಆಗಸ್ಟ್​ 16ರಂದು ‘ಮಂಜಿಲ್​ ಕಿ ತಾರಿಫ್​ (ಗುರಿಯೆಡೆಗೆ ಸಾಗಿದ್ದಕ್ಕೆ ಪ್ರಶಂಸೆ) ಎಂಬ ಶೀರ್ಷಿಕೆಯ ಅಡಿಯಲ್ಲಿ ಜೆಎಂಇ ಮುಖ್ಯಸ್ಥ ಅಫ್ಘಾನಿಸ್ತಾನದಲ್ಲಿ ಮುಜಾಹಿದ್ದೀನ್​​ ಯಶಸ್ಸನ್ನು ಕೊಂಡಾಡಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...