alex Certify ಸಿಎಂ ಆದ ಬಳಿಕ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ʻಪಾದ ಮುಟ್ಟಿʼ ನಮಸ್ಕರಿಸಿದ ಮರಿಯಮ್! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಆದ ಬಳಿಕ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ʻಪಾದ ಮುಟ್ಟಿʼ ನಮಸ್ಕರಿಸಿದ ಮರಿಯಮ್! ವಿಡಿಯೋ ವೈರಲ್

ಇಸ್ಲಾಮಾಬಾದ್‌ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಮರಿಯಮ್ ನವಾಜ್ ಅವರ ವೀಡಿಯೊ ವೈರಲ್‌ ಆಗಿದೆ.

ಮರಿಯಮ್ ನವಾಜ್ ಅವರು ತಮ್ಮ ತಂದೆ ನವಾಜ್ ಷರೀಫ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ, ಈ ವೀಡಿಯೊ ಪಂಜಾಬ್ ವಿಧಾನಸಭೆಯಲ್ಲಿ ಮರಿಯಮ್ ನವಾಜ್ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದು ನಂತರ ತನ್ನ ತಂದೆಯನ್ನು ಭೇಟಿಯಾಗಲು ಹೋದ ಸಮಯದದ್ದಾಗಿದೆ.

ಮರಿಯಮ್ ನವಾಜ್ ವಿಡಿಯೋ ವೈರಲ್

ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರು ಫೆಬ್ರವರಿ 26ರಂದು ಮರಿಯಮ್ ನವಾಜ್ ಅವರ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಈ ಸಂಪ್ರದಾಯ ಯಾವ ಧರ್ಮದಲ್ಲಿದೆ?’ ಎಂದು ಪ್ರಶ್ನಿಸಿದ್ದಾರೆ.

ಈ ವೀಡಿಯೊದಲ್ಲಿ, ಮರಿಯಮ್ ನವಾಜ್ ತನ್ನ ತಂದೆ ನವಾಜ್ ಷರೀಫ್ ಅವರ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ ಮತ್ತು ನವಾಜ್ ಷರೀಫ್ ಕೂಡ ತಮ್ಮ ಮಗಳನ್ನು ಬೆನ್ನಿಗೆ ತಟ್ಟುವ ಮೂಲಕ ಆಶೀರ್ವದಿಸುತ್ತಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...