alex Certify ಯುವತಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ವಿವಾಹಿತ, ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ವಿವಾಹಿತ, ದೂರು

ಬಿಹಾರದ ಜಮುಯಿಯಲ್ಲಿ ವಿವಾಹದ ಭರವಸೆಯೊಂದಿಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ವಿರುದ್ಧ 24 ವರ್ಷದ ಯುವತಿ ಪ್ರಕರಣ ದಾಖಲಿಸಿದ್ದಾರೆ.

ಸೋನು ರಾಜ್ ಅಕಾ ಕಾಂಗ್ರೆಸ್ ಯಾದವ್ ಎಂದು ಗುರುತಿಸಲಾದ ವ್ಯಕ್ತಿ ಜಮುಯಿ ಝಾಝಾ ನಿವಾಸಿ ನೀರಾ ಕುಮಾರ್ ಎಂಬ ಹುಡುಗಿಗೆ ತನ್ನ ಮದುವೆಯಾಗಿದ್ದರೂ ಸುಳ್ಳು ಹೇಳಿದ್ದಾನೆ. ಮದುವೆಯಾಗುವುದಾಗಿ ಹುಸಿ ಭರವಸೆ ನೀಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಸತ್ಯ ತಿಳಿದ ತಕ್ಷಣ ನೀರಾ ತನ್ನ ತಂದೆಯೊಂದಿಗೆ ಲೈಂಗಿಕ ಕಿರುಕುಳದ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾರೆ.

ಕಾಂಗ್ರೆಸ್ ಯಾದವ್ ಬ್ರಹ್ಮಚಾರಿ ಎಂದು ತನಗೆ ಮನವರಿಕೆ ಮಾಡಿಕೊಟ್ಟು ಮದುವೆಯ ಭರವಸೆ ನೀಡಿದ್ದಾರೆ ಎಂದು ನೀರಾ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಯಾದವ್ ತನಗೆ ಸುಳ್ಳು ಹೇಳಿ ಮೂರು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮಗಳ ಮದುವೆ ಮಾಡಲು ಯೋಚಿಸಿದಾಗಲೆಲ್ಲ ಯಾದವ್ ಆಕೆಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ನೀರಾ ತಂದೆ ಹೇಳಿದ್ದಾರೆ.

ಇದೇ ವೇಳೆ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ದೂರಿನ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಡಿಎಸ್ಪಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...