ಕೋವಿಡ್ ಸೋಂಕಿಗೆ ದೇಶದ ಬಹುತೇಕ ಜನರು ರೋಗ ನಿರೋಧಕ ಶಕ್ತಿಯನ್ನು ಅದಾಗಲೇ ಬೆಳೆಸಿಕೊಂಡಿದ್ದರೂ ಸಹ, ಎರಡನೇ ಅಲೆಯಂಥ ಸಂಕಷ್ಟ ಕಾಲವನ್ನು ಮುಂದೆ ಎದುರಿಸಲು ಜನರು ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.
ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಐಸಿಯು ನಿರ್ವಹಣೆ ಮಾಡುತ್ತಿರುವ ಡಾ. ಯುದ್ಯವೀರ್ ಸಿಂಗ್ ಈ ಬಗ್ಗೆ ಮಾತನಾಡಿ, “ಕೋವಿಡ್ ಪ್ರಕರಣಗಳು ಕಡಿಮೆ ಇರುವಾಗ ಆರ್ಥಿಕ ಚಟುವಟಿಕೆಗಳಿಗೆ ಮರುಚಾಲನೆ ಕೊಡಲು ಕೆಲವೊಂದು ನಿರ್ಬಂಧಗಳನ್ನು ಸಡಿಲಿಸುವುದು ಬಹಳ ಮುಖ್ಯ. ಆದರೆ ಈ ಸಂದರ್ಭದಲ್ಲಿ ಜನರು ಎಚ್ಚರಿಕೆಯನ್ನು ಕಡಿಮೆ ಮಾಡದೇ, ಕೋವಿಡ್-19 ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಪಾಲನೆ ಮಾಡುವುದು ಮುಖ್ಯವಾಗಿದೆ” ಎಂದು ತಿಳಿಸಿದ್ದಾರೆ.
ನಿಮ್ಮ ಉಗುರು ಸುಂದರವಾಗಿ ಕಾಣಿಸಲು ಹೀಗೆ ಮಾಡಿ
ಆದರೂ ಸಹ ಕೋವಿಡ್ ಎರಡನೇ ಅಲೆಯಂಥ ಪರಿಸ್ಥಿತಿಗಳು ನಮಗೆ ಬಹಳ ದೊಡ್ಡ ಪಾಠವನ್ನೇ ಕಲಿಸಿದ್ದು, ಯಾವುದೇ ಸಂದರ್ಭದಲ್ಲೂ ಸೋಂಕಿನ ಪ್ರಕರಣಗಳು ವಿಪರೀತವಾಗಿಬಿಡುವ ಸಾಧ್ಯತೆ ಇರುವ ಕಾರಣ ಇಂಥ ಪರಿಸ್ಥಿತಿ ಬಾರದಂತೆ ಸಕಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕೆಂದು ಶ್ರೀ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಪೂಜಾ ಖೋಸ್ಲಾ ತಿಳಿಸುತ್ತಾರೆ.