alex Certify ನಿಮ್ಮ ಉಗುರು ಸುಂದರವಾಗಿ ಕಾಣಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಉಗುರು ಸುಂದರವಾಗಿ ಕಾಣಿಸಲು ಹೀಗೆ ಮಾಡಿ

ಉಗುರನ್ನು ನೋಡಿ ವ್ಯಕ್ತಿತ್ವವನ್ನು ಹೇಳಬಹುದು ಎಂಬ ಮಾತೊಂದಿದೆ. ಹೌದು, ದೇಹಕ್ಕೆ ಬರುವ ಅನಾರೋಗ್ಯ ಮೊದಲು ಕೈಯ ಉಗುರುಗಳಲ್ಲಿ ಕಾಣಿಸುತ್ತದೆ. ಹೀಗಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ಆಕರ್ಷಕ ಉಗುರುಗಳು ನಿಮ್ಮದಾಗುತ್ತವೆ.

ಸಾಧ್ಯವಾದರೆ ಪ್ರತಿ ದಿನ ಇಲ್ಲವೇ ಎರಡು ದಿನಕ್ಕೊಮ್ಮೆ ನಿಂಬೆಹಣ್ಣಿನ ತುಂಡನ್ನು ಕೈ ಉಗುರುಗಳಿಗೆ ತಿಕ್ಕಿ. ಇದರಿಂದ ಉಗುರು ಸ್ವಚ್ಛವಾಗುತ್ತದೆ ಮಾತ್ರವಲ್ಲದೆ ಸಂದಿಯಲ್ಲಿ ಕಣ್ಣಿಗೆ ಕಾಣದೆ ಉಳಿದುಕೊಂಡ ಕೊಳೆಯೂ ಹೋಗುತ್ತದೆ.

ಉಗುರು ನಿಧಾನವಾಗಿ ಬೆಳೆಯುವುದು ಮತ್ತು ಅಲ್ಲಲ್ಲಿ ಬಿಳಿ ಮಚ್ಚೆ ಕಾಣಿಸಿಕೊಳ್ಳುವುದು ಕ್ಯಾಲ್ಸಿಯಂ ಕೊರತೆಯ ಇಲ್ಲವೇ ಅನಾರೋಗ್ಯದ ಸಂಕೇತ. ತಜ್ಞ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ನಿಯಮಿತವಾಗಿ ಉಗುರುಗಳನ್ನು ಕತ್ತರಿಸಿ. ಇದರ ಸುತ್ತಲಿನ ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ. ಇದರಿಂದ ಉಗುರು ವೇಗವಾಗಿ ಬೆಳೆಯುವುದು ನಿಲ್ಲುತ್ತದೆ.

ಉಗುರುಗಳು ಸ್ವಚ್ಛವಾಗಿದ್ದರೆ ಉಗುರುಸುತ್ತಿನಂತಹ ಸಮಸ್ಯೆ ಕಾಡದು. ಹಾಗಾಗಿ ಸಾಧ್ಯವಾದಷ್ಟು ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...