alex Certify ಲಕ್ಕಿ ಅಲಿ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ “ಫ್ಲಾಟ್​ಮೇಟ್​ ಬೇಕು” ಪ್ಲೇಕಾರ್ಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಕಿ ಅಲಿ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ “ಫ್ಲಾಟ್​ಮೇಟ್​ ಬೇಕು” ಪ್ಲೇಕಾರ್ಡ್​

ಅಪಾರ್ಟ್ಮೆಂಟ್​ನಲ್ಲಿ ಇರಲು ಜೊತೆಗಾರರನ್ನು ಹುಡುಕಲು ಹಲವಾರು ದಾರಿಗಳಿವೆ, ಆದರೆ ಇಲ್ಲೊಬ್ಬ ಮಹಾಶಯ ಪ್ರಮುಖ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ ಫ್ಲಾಟ್​ಮೇಟ್​ ಪ್ಲೇಕಾರ್ಡ್​ ಹಿಡಿದು ಗಮನ ಸೆಳೆದಿದ್ದಾನೆ.

ಫ್ಲಾಟ್​ಮೇಟ್​ಗಾಗಿ ತೀವ್ರವಾಗಿ ಹುಡುಕುತ್ತಿರುವ ವ್ಯಕ್ತಿ ಬೆಂಗಳೂರಿನಲ್ಲಿ ನಡೆದ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ ಜನಜಂಗುಳಿ ನಡುವೆ ಫ್ಲಾಟ್​ಮೇಟ್​ ಅಗತ್ಯವಿದೆ ಎಂದು ಬರೆದ ಫಲಕವನ್ನು ತೆಗೆದುಕೊಂಡು ಹೋಗಿದ್ದರು.

ಲಕ್ಕಿ ಅಲಿ ಅವರು ಪ್ರದರ್ಶನ ನೀಡಿದ ಸಂಗೀತ ಕಚೇರಿಯಲ್ಲಿ ಇದು ಸಂಭವಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರವು ಕ್ರೇಜಿಯಾಗಿ ವೈರಲ್​ ಆಗಿದೆ.

ಸಂಗೀತ ಕಾರ್ಯಕ್ರಮದಲ್ಲಿ ಸಮಯದಲ್ಲಿ ಪ್ಲೇಕಾರ್ಡ್​ ಹಿಡಿದಿದ್ದ ವ್ಯಕ್ತಿಯ ಫೋಟೋವನ್ನು ತೆಗೆದವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಚಿತ್ರವನ್ನು ಟ್ವಿಟ್ಟರ್​ ಬಳಕೆದಾರ ಶುಭ್​ ಖಂಡೇಲ್ವಾಲ್​ ಅಪ್​ಲೋಡ್​ ಮಾಡಿದ್ದು “ಲಕ್ಕಿ ಅಲಿ ಸಂಗೀತ ಕಚೇರಿಯಲ್ಲಿ ಇದು ಸಂಭವಿಸಿದೆ. ಬೆಂಗಳೂರಿನಲ್ಲಿ ವಸತಿ ಪರಿಸ್ಥಿತಿ ಕೆಟ್ಟದಾಗಿದೆ” ಎಂದು ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದರ ಬಗ್ಗೆ ಹಾಸ್ಯಮಯವಾಗಿ ಕಾಮೆಂಟ್​ ಮಾಡಲು ನೆಟ್ಟಿಗರನ್ನು ಪ್ರಚೋದಿಸಿತು. ನೂರಾರು ಮಂದಿ ಕಾಮೆಂಟ್​ ಮಾಡಿ ಹಾಸ್ಯಪ್ರಜ್ಞೆ ಮೆರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...