alex Certify ಹೆಲ್ಮೆಟ್‌ ಇಲ್ಲದ ಸವಾರನ ಉತ್ತರಕ್ಕೆ ಪುಣೆ ಪೊಲೀಸ್‌ ಸಖತ್‌ ರಿಪ್ಲೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್‌ ಇಲ್ಲದ ಸವಾರನ ಉತ್ತರಕ್ಕೆ ಪುಣೆ ಪೊಲೀಸ್‌ ಸಖತ್‌ ರಿಪ್ಲೇ

ಪುಣೆ: ಹಲವು ನಗರಗಳಲ್ಲಿ ಹೆಲ್ಮೆಟ್‌ ಕಡ್ಡಾಯ ಮಾಡಿದ್ದರೂ ಕೆಲವರಿಗೆ ಇದನ್ನು ಧರಿಸುವುದು ಎಂದರೆ ಅಸಡ್ಡೆ. ಆದರೆ ಪ್ರಾಣವನ್ನು ಕಾಪಾಡಿಕೊಳ್ಳಲು ಹೆಲ್ಮೆಟ್​ ಹೇಗೆ ಮುಖ್ಯ ಎಂಬ ಬಗ್ಗೆ ಪೊಲೀಸ್​ ಇಲಾಖೆ ಅಗಾಗ್ಗೆ ಗಮನ ಸೆಳೆಯುತ್ತಿರುವುದು ಉಂಟು. ಆದರೂ ಕೆಲವರು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ.

ಈಗ ಹೆಲ್ಮೆಟ್​ ಕುರಿತಾದ ಟ್ವಿಟರ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಟ್ವಿಟರ್ ಬಳಕೆದಾರ ಮೆಲ್ವಿನ್ ಚೆರಿಯನ್ ಅವರು ಈ ಪೋಸ್ಟ್​ ಶೇರ್​ ಮಾಡಿದ್ದಾರೆ.

ಟ್ರಾಫಿಕ್ ಸಿಗ್ನಲ್‌ನಲ್ಲಿ ಹೆಲ್ಮೆಟ್​ ಇಲ್ಲದೇ ನಿಂತಿರುವ ಫೋಟೋಗಳನ್ನು ಪೊಲೀಸ್​ ಇಲಾಖೆ ಶೇರ್​ ಮಾಡಿದೆ. ಪ್ರತಿ ಕ್ರಾಸಿಂಗ್‌ನಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿದ ಚಿತ್ರವು ಹೆಲ್ಮೆಟ್ ಇಲ್ಲದ ಬೈಕ್‌ ಸವಾರನನ್ನು ತೋರಿಸುತ್ತಿದ್ದು, ಇದನ್ನು ಹಲವರು ಟ್ವಿಟರ್​ನಲ್ಲಿ ತಮಾಷೆಯಾಗಿ ತೆಗೆದುಕೊಂಡಿದ್ದರೆ, ತಮ್ಮ ಫೋಟೋ ನೋಡಿ ಹಲವರು ಕಂಗಾಲಾಗಿದ್ದಾರೆ.

ಒಬ್ಬ ಚಾಲಕ ಹೆಲ್ಮೆಟ್​ ಇಲ್ಲದೇ ಇರುವ ತನ್ನ ಫೋಟೋ ನೋಡಿ “ಧನ್ಯವಾದಗಳು @PuneCityPolice. ನಾನು ಚೆನ್ನಾಗಿ ಕಾಣುತ್ತೇನೆ. ಆದರೂ ಚಲನ್ ಪಾವತಿಸುತ್ತೇನೆ,” ಎಂದು ಬರೆದುಕೊಂಡಿದ್ದಾನೆ.

ಅದಕ್ಕೆ ಪುಣೆ ಪೊಲೀಸರು ಪ್ರತಿಕ್ರಿಯೆ ನೀಡಿ “ಖಂಡಿತ. P.S: ಕಪ್ಪು ಹೆಲ್ಮೆಟ್ ಧರಿಸಿದರೆ ನಿಮ್ಮ ಸುಂದರವಾದ ಕಪ್ಪು ಜಾಕೆಟ್‌ಗೆ ಮ್ಯಾಚಿಂಗ್​ ಆಗುತ್ತದೆ, ಸೋ ಹೆಲ್ಮೆಟ್ ಧರಿಸಿ” ಎಂದಿದ್ದಾರೆ. ಹೀಗೆ ಹಲವು ಕುತೂಹಲದ ಬರಹಗಳನ್ನು ಇದರಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...