alex Certify ʼದಿ ಫ್ಯಾಮಿಲಿ ಮ್ಯಾನ್ʼ​ ವೆಬ್​ ಸರಣಿ ಪಾರ್ನ್​ಗೆ ಸಮ ಎಂದ ನಟನಿಗೆ ಟಾಂಗ್​ ಕೊಟ್ಟ ಮನೋಜ್​ ಬಾಜಪೇಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದಿ ಫ್ಯಾಮಿಲಿ ಮ್ಯಾನ್ʼ​ ವೆಬ್​ ಸರಣಿ ಪಾರ್ನ್​ಗೆ ಸಮ ಎಂದ ನಟನಿಗೆ ಟಾಂಗ್​ ಕೊಟ್ಟ ಮನೋಜ್​ ಬಾಜಪೇಯಿ….!

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​​ ವಿದೂಷಕ ಸುನೀಲ್​ ಪಾಲ್​​​ ಫ್ಯಾಮಿಲಿ ಮ್ಯಾನ್​ ವೆಬ್​ ಸರಣಿ ಹಾಗೂ ಮನೋಜ್​ ಬಾಜಪೇಯಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ರಾಜ್​ ಕುಂದ್ರಾ ಬಂಧನ ಪ್ರಕರಣ ಸಂಬಂಧ ಹೇಳಿಕೆ ನೀಡುವ ವೇಳೆ ಸುನೀಲ್​ ಪಾಲ್​​ ʼದಿ ಫ್ಯಾಮಲಿ ಮ್ಯಾನ್ʼ​ ವೆಬ್​ ಸರಣಿ ಕೂಡ ಪಾರ್ನ್ ಚಿತ್ರಗಳ ಅಡಿಯಲ್ಲೇ ಬರುತ್ತದೆ ಎಂದು ಗಂಭೀರ ಆರೋಪ ಮಾಡಿದ್ದರು.

ಸುನೀಲ್​​ ಪಾಲ್​ರ ಈ ಎಲ್ಲಾ ಆರೋಪಗಳಿಗೆ ಮನೋಜ್​ ಬಾಜಪೇಯಿ ತಕ್ಕ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡಿದ ಮನೋಜ್​ ಬಾಜಪೇಯಿ, ನನಗೆ ಕೆಲಸವಿಲ್ಲದ ಜನರ ಮನಸ್ಥಿತಿ ಅರ್ಥವಾಗುತ್ತದೆ. ನಾನು ಕೂಡ ಇದೇ ಸ್ಥಿತಿಯಲ್ಲಿ ಇದ್ದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಧ್ಯಾನ ಮಾಡುವ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳುವ ಮೂಲಕ ಸುನೀಲ್​ ಪಾಲ್​ಗೆ ಟಾಂಗ್​ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...