alex Certify ಜನ್ಮಾಷ್ಟಮಿ ಪ್ರಯುಕ್ತ ಬರೋಬ್ಬರಿ 88 ಖಾದ್ಯ ತಯಾರಿಸಿ ದಾಖಲೆ ಬರೆದ ಮಂಗಳೂರು ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮಾಷ್ಟಮಿ ಪ್ರಯುಕ್ತ ಬರೋಬ್ಬರಿ 88 ಖಾದ್ಯ ತಯಾರಿಸಿ ದಾಖಲೆ ಬರೆದ ಮಂಗಳೂರು ಮಹಿಳೆ…!

ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಪಿ ಕಾಮತ್​​ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ರೋಗಿಯು ಮಾಡಿದ ಸಾಧನೆಯ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಜನ್ಮಾಷ್ಟಮಿಯ ದಿನದಂದು ಡಾ. ಕಾಮತ್​​ರ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯು ಬರೋಬ್ಬರಿ 88 ಖಾದ್ಯಗಳನ್ನು ತಯಾರಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.

ಇವರು ಮತ್ತು ಶ್ರೀಕೃಷ್ಣನ ಮೇಲೆ ಇವರಿಗಿರುವ ಭಕ್ತಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಇವರು ನನ್ನ ಪೇಷೆಂಟ್​. ತಮ್ಮ ಹಿಂದಿನ ದಾಖಲೆಯನ್ನು ಈ ಮಹಿಳೆ ಇಂದು ಮುರಿದಿದ್ದಾರೆ. ಗೋಕುಲಾಷ್ಟಮಿ ನಿಮಿತ್ತ ನಿನ್ನೆ 88 ಖಾದ್ಯಗಳನ್ನು ಇವರು ತಯಾರಿಸಿದ್ದಾರೆ ಎಂದು ಈ ಫೋಟೋಗಳಿಗೆ ಡಾ ಕಾಮತ್​ ಶೀರ್ಷಿಕೆ ನೀಡಿದ್ದಾರೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯು ಪ್ರಮುಖ ಹಿಂದೂ ಹಬ್ಬಗಳ ಪೈಕಿ ಒಂದಾಗಿದೆ. ನಿನ್ನೆ ದೇಶಾದ್ಯಂತ ಬಹಳ ಉತ್ಸಾಹದಿಂದ ಗೋಕುಲಾಷ್ಟಮಿಯನ್ನು ಆಚರಿಸಲಾಗಿದೆ. ಈ ಹಬ್ಬವು ಭಗವಾನ್​ ವಿಷ್ಣುವಿನ ಅವತಾರವಾದ ಕೃಷ್ಣನ ಜನ್ಮದಿನವನ್ನು ನೆನಪಿಸುವ ಹಬ್ಬವಾಗಿದೆ. ಸೆಪ್ಟೆಂಬರ್​ ಆರು ಹಾಗೂ ಏಳರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...