alex Certify ಕರುಳುಗಳ ಶಕ್ತಿ ಉತ್ತಮಪಡಿಸಿಕೊಳ್ಳಲು ಮಾಡಿ ʼಮಂಡೂಕಾಸನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರುಳುಗಳ ಶಕ್ತಿ ಉತ್ತಮಪಡಿಸಿಕೊಳ್ಳಲು ಮಾಡಿ ʼಮಂಡೂಕಾಸನʼ

ಮಂಡೂಕ ಎಂದರೆ ಕಪ್ಪೆ. ಈ ಆಸನವನ್ನು ಮಾಡಿದಾಗ ದೇಹವು ಕಪ್ಪೆಯ ಆಕಾರವನ್ನು ಹೋಲುತ್ತದೆ. ಹೊಟ್ಟೆಯ ಮಾಂಸಖಂಡಗಳು ಮತ್ತು ಕರುಳುಗಳ ಶಕ್ತಿಯನ್ನು ಉತ್ತಮಪಡಿಸಿಕೊಳ್ಳಲು ಈ ಆಸನ ಸಹಕಾರಿಯಾಗುತ್ತದೆ.

ಇದನ್ನು ಮಾಡುವ ಕ್ರಮ ಹೇಗೆ ಅಂತ ತಿಳಿದುಕೊಳ್ಳಿ. ಬೆನ್ನಿನ ಭಾಗವನ್ನು ನೇರವಾಗಿಸಿ ವಜ್ರಾಸನ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕು. ಬಲಕೈ ಹಿಡಿಕೆಯನ್ನು ಬಿಗಿಮಾಡಿ ಎಡ ಅಂಗೈಯಲ್ಲಿ ಇಡಬೇಕು. ಈಗ ಕೈಗಳನ್ನು ಅದೇ ಸ್ಥಿತಿಯಲ್ಲಿ ಇರಿಸಿ ಕಿಬ್ಬೊಟ್ಟೆ ಕೆಳಗಿನ ಭಾಗವನ್ನು ತಾಗಿಸುವ ಹಾಗೆ, ಒತ್ತಡ ಮಾಡಿದಂತೆ ಇರಿಸಬೇಕು. ಪೂರ್ತಿಯಾಗಿ ಉಸಿರನ್ನು ತೆಗೆದುಕೊಂಡು ಶರೀರವನ್ನು ಮೇಲಕ್ಕೆ ಅಮುಕಿದಂತೆ ಮಾಡಿ ಸೊಂಟದಿಂದ ಸಾಧ್ಯವಾದಷ್ಟು ಮುಂದಕ್ಕೆ ಬಾಗಬೇಕು. ಬಾಗುವಾಗ ನಿಧಾನವಾಗಿ ಉಸಿರನ್ನು ಬಿಡಬೇಕು.

ಈ ಆಸನವನ್ನು ಮಾಡುವುದರಿಂದ ದೇಹದಲ್ಲಿ ಉಳಿದಿರುವ ಅನಗತ್ಯವಾದ ವಾಯು ಹೊರಕ್ಕೆ ಹೋಗುತ್ತದೆ. ಮೆದುಳಿಗೆ ರಕ್ತ ಪರಿಚಲನೆ ಸರಿಯಾಗಿ ನಡೆದು ಮೆದುಳಿನ ಕಣಗಳು ಉತ್ತೇಜಿತವಾಗುತ್ತದೆ. ಮೊಣಕಾಲಿನ ನೋವು ಕಡಿಮೆಯಾಗುತ್ತದೆ. ನಿತ್ಯ ಈ ಆಸನ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಆದರೆ ಗರ್ಭಿಣಿಯರು ಈ ಆಸನವನ್ನು ಮಾಡದೇ ಇದ್ದರೆ ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...