alex Certify 15 ನಿಮಿಷಗಳ ಉಬರ್​ ರೈಡ್ ​ಗೆ 32 ಲಕ್ಷ ರೂಪಾಯಿ…..! ಬಿಲ್‌ ನೋಡಿ ಯುವಕ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ನಿಮಿಷಗಳ ಉಬರ್​ ರೈಡ್ ​ಗೆ 32 ಲಕ್ಷ ರೂಪಾಯಿ…..! ಬಿಲ್‌ ನೋಡಿ ಯುವಕ ಕಂಗಾಲು

ಈಗ ಜಗತ್ತಿನಾದ್ಯಂತ ಮಹಾನಗರಗಳಲ್ಲಿ ಮೊಬೈಲ್​ ಅಪ್ಲಿಕೇಶನ್​ ಆಧಾರಿತ ಸಾರಿಗೆ ಸೇವೆ ಹೆಚ್ಚು ಪ್ರಚಲಿತದಲ್ಲಿದೆ. ಇದರ ಬಳಕೆಯೂ ಜನರಿಗೆ ಹೆಚ್ಚು ಆಪ್ಯಾಯಮಾನವಾಗಿದೆ. ಆದರೆ, ಅದರಲ್ಲೊಂದಿಷ್ಟು ಸಮಸ್ಯೆಯೂ ಕಾಣಿಸಿದೆ.

ಇಲ್ಲೊಂದು ಪ್ರಕರಣದಲ್ಲಿ 15 ನಿಮಿಷಗಳ ಉಬರ್​ ರೈಡ್​ಗೆ 32 ಲಕ್ಷ ರೂ. ಬಿಲ್​ ಆದ ಆಶ್ಚರ್ಯಕರ ಪ್ರಸಂಗವೊಂದು ನಡೆದಿದೆ.

ಹ್ಯಾಂಗೋವರ್​ನಲ್ಲಿದ್ದ ವ್ಯಕ್ತಿ ಎಚ್ಚರಗೊಂಡು ತನ್ನ ಉಬರ್​ ಅಪ್ಲಿಕೇಶನ್​ 39,317 ಡಾಲರ್​ (ಭಾರತೀಯ ಕರೆನ್ಸಿಯಲ್ಲಿ ಅಂದಾಜು 32 ಲಕ್ಷ ರೂ.) ಬಿಲ್​ ಅನ್ನು ತೋರಿಸಿದೆ ಎಂದು ತಿಳಿದು ಶಾಕ್​ ಆಗಿದ್ದರು.

ವೃತ್ತಿಯಲ್ಲಿ ಅಡುಗೆ ತಯಾರಕನಾದ 22 ವರ್ಷ ವಯಸ್ಸಿನ ಆಲಿವರ್​ ಕಪ್ಲಾನ್​ ಎಂಬಾತ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿರುವ ಬಕ್ಸ್​ಟನ್​ ಇನ್​ನಲ್ಲಿ ತನ್ನ ಕೆಲಸವನ್ನು ಮುಗಿಸಿದ ನಂತರ ಉಬರ್​ ರೈಡ್​ ಅನ್ನು ಬುಕ್​ ಮಾಡಿದ್ದಾರೆ. ತಮ್ಮ ಕೆಲಸದ ಸ್ಥಳದಿಂದ ಕೇವಲ ನಾಲ್ಕು ಮೈಲುಗಳಷ್ಟು ದೂರದಲ್ಲಿರುವ ವಿಚ್​ವುಡ್​ನಲ್ಲಿರುವ ಪಬ್​ನಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ಪ್ಲಾನ್​ ಮಾಡಿದ್ದರು.

ರೈಡ್​ ಅನ್ನು ಬುಕ್​ ಮಾಡುವಾಗ ಅಪ್ಲಿಕೇಶನ್​ ತನ್ನ ದರವನ್ನು 11-12 ಡಾಲರ್​ ನಡುವೆ ಉಲ್ಲೇಖಿಸಿದೆ, ಅದನ್ನು ಅವರು ಒಪ್ಪಿದ್ದರು. ಉಬರ್​ ಚಾಲಕ ಆತನನ್ನು ಪಬ್​ಗೆ ಡ್ರಾಪ್​ ಮಾಡಿದ. ಅಲ್ಲಿವರೆಗೂ ಅದು ಸಾಮಾನ್ಯ ಉಬರ್​ ಡ್ರೈವ್​ ಎನಿಸಿದ್ದರೂ, ಟ್ರಿಪ್​ ಮುಗಿದ ಮೇಲೆ ಆತನಿಗೆ ಗೊತ್ತಾಗಿದ್ದು ಅದು ದುಬಾರಿ ರೈಡ್​ ಎಂದು. ವ್ಯಾಲೆಟ್​ನಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಮೊತ್ತವನ್ನು ಕಡಿತಗೊಳಿಸಲಾಗಲಿಲ್ಲ ಎಂದು ಎಚ್ಚರಿಸುವ ಅಧಿಸೂಚನೆ ಬಂದಿತ್ತು.

ಮರುದಿನ ಬೆಳಿಗ್ಗೆ ಹ್ಯಾಂಗ್​ ಓವರ್​ನಿಂದ ಎಚ್ಚರಗೊಂಡಾಗ 39,317 ಡಾಲರ್​ ಬಿಲ್​ ಆಗಿರುವುದನ್ನು ಖಚಿತಪಡಿಸಿಕೊಂಡಾತ ತಕ್ಷಣ ಉಬರ್​ ಅಪ್ಲಿಕೇಶನ್​ನ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿದರು.

ಅಸಾಮಾನ್ಯ ಬಿಲ್ಲಿಂಗ್​ ಉಬರ್​ ಉದ್ಯೋಗಿಗೆ ಕೂಡ ಆಶ್ಚರ್ಯವನ್ನುಂಟು ಮಾಡಿದೆ. ಉಬರ್​ ಸಪೋರ್ಟಿಂಗ್​ ಟೀಂ ಈ ವಿಷಯವನ್ನು ತನಿಖೆ ಮಾಡಿ, ಅಪ್ಲಿಕೇಶನ್​ನಲ್ಲಿನ ಅನಿರೀಕ್ಷಿತ ದೋಷದಿಂದಾಗಿ ವ್ಯಕ್ತಿಯ ಡ್ರಾಪ್​-ಆಫ್​ ಸ್ಥಳವನ್ನು ಆಸ್ಟ್ರೇಲಿಯಾಕ್ಕೆ ಬದಲಾಯಿಸಲಾಗಿತ್ತು ಎಂದು ಕಂಡುಹಿಡಿಯಲಾಯಿತು.‌

ದೋಷದ ಹಿಂದಿನ ನಿಖರವಾದ ಕಾರಣ ಗುರುತಿಸಲಾಗಲಿಲ್ಲ ಆದರೆ ಕಂಪನಿಯು ಅವನ ಸ್ಥಳವನ್ನು ಮ್ಯಾಂಚೆಸ್ಟರ್​ನ ವಿಚ್​ವುಡ್​ನಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಅದೇ ಹೆಸರಿನ ಸ್ಥಳಕ್ಕೆ ಬದಲಾಯಿಸಲಾಗಿದೆ ಎಂದು ಹೇಳಿಕೊಂಡಿದೆ.

ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್​ ಇಲ್ಲದ ಕಾರಣ, ಕಡಿತಗೊಳಿಸಲು ಅಪ್ಲಿಕೇಶನ್​ಗೆ ಸಾಧ್ಯವಾಗಲಿಲ್ಲ. ಆದರೆ ತನ್ನ ಬ್ಯಾಂಕ್​ ಖಾತೆಯಲ್ಲಿ ನಿಜವಾಗಿ ಅಂತಹ ಹಣವನ್ನು ಹೊಂದಿದ್ದರೆ ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು ಎಂದು ಆ ಪ್ರಯಾಣಿಕ ಕಳವಳ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...