alex Certify ಹ್ಯಾಂಗ್​ ಓವರ್ ನಿಂದ ಹೊರಬರೋಕೆ ಸಾಧ್ಯವಾಗಿಲ್ಲವೇ….? ಈ ಮನೆಮದ್ದನ್ನ ಟ್ರೈ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಂಗ್​ ಓವರ್ ನಿಂದ ಹೊರಬರೋಕೆ ಸಾಧ್ಯವಾಗಿಲ್ಲವೇ….? ಈ ಮನೆಮದ್ದನ್ನ ಟ್ರೈ ಮಾಡಿ

ಪಾರ್ಟಿ ಮೋಜು ಮಸ್ತಿ ಅಂದ ಮೇಲೆ ಅಲ್ಲಿ ಮದ್ಯಪಾನ ಇದ್ದೇ ಇರುತ್ತೆ. ಸಂಭ್ರಮಕ್ಕೆ ಎಣ್ಣೆ ಕುಡಿದ ಮೇಲೆ ಹ್ಯಾಂಗ್​ ಓವರ್​ ಇಳಿಯೋಕೆ ಏನು ಮಾಡಬೇಕು ಎಂಬ ಗೊಂದಲ ಅನೇಕರಲ್ಲಿದೆ. ಇದಕ್ಕೆ  ಕೆಲ ಮನೆಮದ್ದುಗಳು ಇಲ್ಲಿವೆ.

ಆಪಲ್​ ಸಿಡೆರ್​ ವಿನೆಗರ್​ ಹಾಗೂ ಶುಂಠಿ : ಮದ್ಯಪಾನ ಮಾಡಿದ ಬಳಿಕ ಹೊಟ್ಟೆ ಉರಿ, ವಾಂತಿ ಬಂದ ಅನುಭವ ಉಂಟಾಗ್ತಿದ್ರೆ ನೀವು ಈ ಮನೆಮದ್ದನ್ನ ಟ್ರೈ ಮಾಡಬಹುದು. ತಲಾ 5 ಎಂಎಲ್​ ಆಪಲ್​ ಸೀಡರ್​ ವಿನೆಗರ್, ನಿಂಬು ರಸ, ಶುಂಠಿ ರಸ, 1 ಚಮಚ ಜೇನುತುಪ್ಪ ಹಾಗೂ 200 ಎಂಎಲ್​ ನೀರನ್ನ ಸೇರಿಸಿ ಕುಡಿಯೋದ್ರಿಂದ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.

ಬಾಳೆಹಣ್ಣಿನ ಮಿಲ್ಕ್​ಶೇಕ್​ : ಅತಿಯಾದ ಮದ್ಯ ಸೇವನೆಯಿಂದ ಡಿಹೈಡ್ರೇಷನ್​ ಸಮಸ್ಯೆ ಹಾಗೂ ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಶಿಯಂ ಕೊರತೆಗೆ ಕಾರಣವಾಗುತ್ತೆ. ಇದಕ್ಕೆ ನೀವು 1 ಬಾಳೆಹಣ್ಣು, ಹಸುವಿನ ಹಾಲು, ಜೇನುತುಪ್ಪ ಳಿಸಿ ಮಿಲ್ಕ್ ಶೇಕ್​ ಮಾಡಿ ಕುಡಿಯಬಹುದಾಗಿದೆ. ಬಾಳೆಹಣ್ಣನ್ನ ಹಾಲಿನ ಜೊತೆ ಬ್ಲೆಂಡ್​ ಮಾಡಿ ಇದಕ್ಕೆ ಜೇನುತುಪ್ಪವನ್ನ ಸೇರಿಸಿ ಕುಡಿಬೇಕು.

ಎಳನೀರು : ಮದ್ಯಪಾನದಿಂದ ಉಂಟಾಗುವ ಹ್ಯಾಂಗ್​ ಓವರ್​ಗೆ ಎಳನೀರು ಉತ್ತಮ ಔಷಧಿಯಾಗಿದೆ. 2 ಕಪ್​ ತೆಂಗಿನ ಕಾಯಿಯ ನೀರು, 1 ಕಪ್​ ಎಳೆನೀರು, 1/2 ಕಪ್​ ಹಾಲಿಗೆ ಸಕ್ಕರೆ ಹಾಕಿ ಸ್ಮೂದಿ ತಯಾರಿಸಿ ಕುಡಿಯಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...