alex Certify ’ಶ್ರೀವಲ್ಲಿ’ ಸ್ಟೆಪ್ ಹಾಕಿ ಅಳುತ್ತಿರುವ ಮಗುವನ್ನು ಸಮಾಧಾನ ಮಾಡಲು ಮುಂದಾದ ಯೂಟ್ಯೂಬರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಶ್ರೀವಲ್ಲಿ’ ಸ್ಟೆಪ್ ಹಾಕಿ ಅಳುತ್ತಿರುವ ಮಗುವನ್ನು ಸಮಾಧಾನ ಮಾಡಲು ಮುಂದಾದ ಯೂಟ್ಯೂಬರ್‌

ತೆಲುಗಿನ ’ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ನೃತ್ಯ ಎಲ್ಲೆಡೆ ಫೇಮಸ್ಸಾಗಿದ್ದು, ’ಶ್ರೀವಲ್ಲಿ’ ಹಾಡಿಗೆ ಅಲ್ಲು ಹಾಕಿರುವ ಸ್ಟೆಪ್ ಒಂದು ನೆಟ್ಟಿಗರಲ್ಲಿ ಭಾರೀ ಕ್ರೇಜ಼್‌ ಸೃಷ್ಟಿಸಿದೆ.

ಇದೀಗ ಅಳುತ್ತಿರುವ ಮಗುವೊಂದನ್ನು ಸಮಾಧಾನ ಮಾಡಲೆಂದು ಅದರ ಅಪ್ಪ ಅಲ್ಲು ಅರ್ಜುನ್‌‌ರ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯೂಟ್ಯೂಬರ್‌‌ ಒಬ್ಬರು ಹೀಗೆ ಮಾಡಿದ್ದು, ಅದರು ಆತನ ಮಗುವಿಗೆ ಹಿಡಿಸಿತೋ ಇಲ್ಲವೋ ಗೊತ್ತಿಲ್ಲ ಆದರೆ ನೋಡಿದ ಮಂದಿಗಂತೂ ಭರಪೂರ ಮನರಂಜನೆ ಸಿಕ್ಕಿದ್ದಂತೂ ಸತ್ಯ.

ಈ ಕಾರಣಕ್ಕೆ ‘ಮಹೇಶ್‌ ಬಾಬು’ ಬಗ್ಗೆ ಬೇಸರಗೊಂಡಿದ್ದಾರೆ ಅಭಿಮಾನಿಗಳು

ಈ ಫನ್ನಿ ವಿಡಿಯೋವನ್ನು ಶದಬ್ ಅಲಿ ಖಾನ್ ಎಂಬಾತ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಪುಟ್ಟ ಮಗುವನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು, ಶ್ರೀವಲ್ಲಿ ಹಾಡಿನ ಸ್ಟೆಪ್ ಹಾಕಿ ಅದನ್ನು ಸಮಾಧಾನ ಮಾಡಲು ಯತ್ನಿಸುತ್ತಿರುವ ಪ್ರಯತ್ನವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

“ನಿಮ್ಮ ಮಗುವಿನೊಂದಿಗೆ ಶ್ರೀವಲ್ಲಿ ಸ್ಟೆಪ್‌ ಅನ್ನು ಒಮ್ಮೆ ಪ್ರಯತ್ನಿಸಿ ನೋಡಿ,” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...