alex Certify ರೆಸ್ಟೋರೆಂಟ್‌ನ ವಾಶ್‌ ರೂಂ ನಲ್ಲಿ 45 ನಿಮಿಷ ಕಳೆದ ಪತಿಗೆ ಪತ್ನಿಯಿಂದ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಸ್ಟೋರೆಂಟ್‌ನ ವಾಶ್‌ ರೂಂ ನಲ್ಲಿ 45 ನಿಮಿಷ ಕಳೆದ ಪತಿಗೆ ಪತ್ನಿಯಿಂದ ಶಾಕ್

ವಾಶ್‌ರೂಂಗೆ ಹೋಗುವ ತನ್ನ ಪತಿ ಮರಳಿ ಬರಲು 45 ನಿಮಿಷಗಳಾದರೂ ಬೇಕೆಂದು ದೂರುವ ಪತ್ನಿಯೊಬ್ಬಳು, ಹೀಗೆ ದಿನವೊಂದರಲ್ಲಿ 4-5 ಬಾರಿ ’ಟ್ರಿಪ್‌’ ಮಾಡುವ ತನ್ನ ಪತಿಯ ಈ ಖಯಾಲಿ ಏನೆಂದು ತನಗೆ ತಿಳಿಯದಂತಾಗಿದೆ ಎಂದಿದ್ದಾರೆ.

ಮನೆಯಲ್ಲಿ ಗಂಡನ ಈ ಅಭ್ಯಾಸದಿಂದ ಭಾರೀ ಕಿರಿಕಿರಿಯಾಗಿದ್ದ ಈಕೆ, ರೆಸ್ಟೋರೆಂಟ್‌ನಲ್ಲಿ ಹೀಗೆ ಮಾಡದಿರಲು ಆತನಿಗೆ ಹೇಳಿಕೊಂಡು ಕರೆದೊಯ್ದಿದ್ದಾಳೆ. ಆದರೆ ಈ ಮಹಾಶಯ ರೆಸ್ಟೋರೆಂಟ್‌ನಲ್ಲೂ ತನ್ನ ’ಟ್ರಿಪ್’ ಮುಂದುವರೆಸಿದ್ದಾನೆ.

ಸೊಳ್ಳೆ ಓಡಿಸೋಕೆ ಇಲ್ಲಿದೆ ಸೂಪರ್ ಮನೆಮದ್ದು

ಟೇಬಲ್ ಮೇಲೆ ಆರ್ಡರ್‌ ಮಾಡಿದ ಊಟ ಬಂದ 45 ನಿಮಿಷಗಳಾದರೂ ಆತ ಬಾರದೇ ಇದ್ದಿದ್ದನ್ನು ಕಂಡು ಸಿಟ್ಟಿಗೆದ್ದ ಮಡದಿ, ಆತನ ಊಟವನ್ನೂ ತಾನೇ ತಿಂದು ಬಿಲ್ ಪಾವತಿ ಮಾಡಿ ಅಲ್ಲಿಂದ ಒಬ್ಬಳೇ ಹೊರಟಿದ್ದಾಳೆ.

“ನಿಮ್ಮ ಪತಿಗೆ ಬಾತ್‌ರೂಂಗೆ ಹೋಗುವ ವೇಳೆ ಫೋನ್ ಬಿಟ್ಟು ಹೋಗಲು ತಿಳಿಸಿ. ಇದಾದ ಮೇಲೂ ಅವರ ಖಯಾಲಿ ಮುಂದುವರೆದರೆ ಅವರಲ್ಲಿ ಏನೋ ದೈಹಿಕ ಸಮಸ್ಯೆ ಇದ್ದು, ವೈದ್ಯರನ್ನು ನೋಡಬೇಕೆಂದು ಅರ್ಥ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮೂಲಕ ಸಲಹೆ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...