alex Certify ರೈಲೊಳಗೆ ಮಲಗಿದ್ದ ಪ್ರಯಾಣಿಕರನ್ನು ದಾಟಲು ಸಖತ್‌ ಪ್ಲಾನ್;‌ ವಿಡಿಯೋ ನೋಡಿ ಭೇಷ್‌ ಅಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲೊಳಗೆ ಮಲಗಿದ್ದ ಪ್ರಯಾಣಿಕರನ್ನು ದಾಟಲು ಸಖತ್‌ ಪ್ಲಾನ್;‌ ವಿಡಿಯೋ ನೋಡಿ ಭೇಷ್‌ ಅಂದ ನೆಟ್ಟಿಗರು

ಕಿಕ್ಕಿರಿದ ಭಾರತೀಯ ರೈಲುಗಳಲ್ಲಿ ಪ್ರಯಾಣಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಹಲವಾರು ದಿನಗಳವರೆಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಜನರು, ಹಾದುಹೋಗುವ ಜಾಗದಲ್ಲಿಯೇ ಮಲಗಿ ಬಿಡುತ್ತಾರೆ. ಇಂಥ ಸಂದರ್ಭದಲ್ಲಿ ರೈಲಿನ ಒಳಗೆ ನಡೆದಾಡುವುದು ದೂರದ ಮಾತು, ಇಳಿಯುವ ನಿಲ್ದಾಣ ಬಂದರೂ ಇಳಿಯುವುದು ಅಸಾಧ್ಯವೇ ಸರಿ.

ಆದರೆ ಇಲ್ಲೊಬ್ಬ ವ್ಯಕ್ತಿ ಉಪಯೋಗಿಸಿದ ಬುದ್ಧಿವಂತಿಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದ್ದು, ಜನರು ಆತನಿಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ. ರೈಲಿನ ಒಳಗೆ ನೆಲದ ಮೇಲೆ ಮಲಗಿರುವ ಪ್ರಯಾಣಿಕರನ್ನು ದಾಟಿ ಈ ವ್ಯಕ್ತಿ ಹೋದ ಪರಿ ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ.

ರೈಲಿನಲ್ಲಿ ನಿಲ್ಲಲು ಬಳಸುವ ಕೈಕಂಬ (ಹ್ಯಾಂಡ್ರೈಲ್) ಸಹಾಯದಿಂದ ಈ ವ್ಯಕ್ತಿ ಮಲಗಿರುವ ವ್ಯಕ್ತಿಗಳನ್ನು ದಾಟುತ್ತಾ ಹೋಗಿದ್ದಾನೆ. ಕೈಕಂಬ ಹಿಡಿದು ಮೇಲೆ ತೂಗಾಡುತ್ತಾ ವ್ಯಕ್ತಿ ದಾಟಲು ಪ್ರಯತ್ನಿಸುತ್ತಿರುವ ವಿಡಿಯೋ ಇದಾಗಿದೆ. ಈ ಘಟನೆ ಎಲ್ಲಿ ನಡೆದಿರುವುದು ಎಂದು ವಿಡಿಯೋದಲ್ಲಿ ಹೇಳಿಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇದು ಭಾರಿ ವೈರಲ್​ ಆಗುತ್ತಿದ್ದು, ಈ ಪ್ಲ್ಯಾನ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದಾಗಲೇ ಈ ವಿಡಿಯೋ ಕ್ಲಿಪಿಂಗ್​ ಟ್ವಿಟರ್‌ನಲ್ಲಿ 1.75 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...