alex Certify ಪಾನ್ ಜೊತೆ ಈತ ʼಆಧಾರ್ʼ​ ಲಿಂಕ್​ ಮಾಡಿದ್ದನ್ನು ನೋಡಿದ್ರೆ ನಗ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನ್ ಜೊತೆ ಈತ ʼಆಧಾರ್ʼ​ ಲಿಂಕ್​ ಮಾಡಿದ್ದನ್ನು ನೋಡಿದ್ರೆ ನಗ್ತೀರಿ…!

ಆಧಾರ್​ ಕಾರ್ಡ್​ ಅನ್ನು ಪಾನ್​ ಕಾರ್ಡ್​ನೊಂದಿಗೆ ಲಿಂಕ್​ ಮಾಡುವುದು ಅನೇಕರಿಗೆ ಬೇಸರದ ಕೆಲಸ, ಹಲವರು ಲಿಂಕ್​ ಮಾಡಲು ಪರದಾಡಿ ಸೋತು ಸುಮ್ಮನಾಗಿದ್ದಾರೆ. ಈ ನಡುವೆ ಎರಡನ್ನೂ ಲಿಂಕ್​ ಮಾಡುವ ಗಡುವುಗಳನ್ನು ಮುಂದೂಡುತ್ತಲೇ ಬರಲಾಗಿರುವ ನಡುವೆ ಟ್ವಿಟರ್​ ಬಳಕೆದಾರರೊಬ್ಬರು ತಮಾಷೆಯ ಟ್ವೀಟ್​ ಹಂಚಿಕೊಂಡಿದ್ದಾರೆ, ಅದು ನಗು ತರಿಸುತ್ತದೆ.

ಅಥರ್ವ ಗುಪ್ತೆ ಅವರು ಟ್ವೀಟ್​ನಲ್ಲಿ ಆಧಾರ್​ ಕಾರ್ಡನ್ನು ಪಾನ್​ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ ಮೋಜಿನ ದಾರಿ ಹಂಚಿಕೊಂಡಿದ್ದರೆ. ಅವರು ಹಂಚಿಕೊಂಡ ಫೋಟೋದಲ್ಲಿ ಸುಲಭವಾದ ಮಾರ್ಗವನ್ನು ತೋರಿಸುತ್ತದೆ. ಆದರೆ, ಆ ಫೋಟೋ ಚಿತ್ರ ಕೇವಲ ಹಾಸ್ಯದ ಉದ್ದೇಶಕ್ಕಾಗಿ ಮಾತ್ರ.

ಅವರು ಮಾಡಿದ್ದೇನು ಗೊತ್ತಾ? ಸ್ಟೌವ್​ ಮೇಲೆ ಅಡುಗೆ ಮಾಡುವ ಪ್ಯಾನ್​ ಇಟ್ಟು ಅದರ ಮೇಲೆ ಆಧಾರ್​ ಕಾರ್ಡ್​ ಇಟ್ಟು, ಟೇಪ್​ ಹಚ್ಚಿದ್ದಾರೆ. ಯಾರೇ ನೋಡಿದರು ನಗು ತರಿಸುತ್ತದೆ.

ಅವರ ಪೋಸ್ಟ್​ ವೈರಲ್​ ಆಗಿದ್ದು, 50 ಸಾವಿರಕ್ಕೂ ಹೆಚ್ಚು ಲೈಕ್​ ಬಂದಿದೆ. ಅನೇಕರು ಹಾಸ್ಯಭರಿತ ಕಾಮೆಂಟ್​ ಮಾಡಿ ಖುಷಿಹಂಚಿಕೊಂಡಿದ್ದಾರೆ. “ಸೃಜನಶೀಲತೆಗೆ 100 ಅಂಕಗಳು” ಎಂದು ಒಬ್ಬರು ಬರೆದಿದ್ದಾರೆ.

ಸೆಂಟ್ರಲ್​ ಬೋಡ್​ ಆಫ್​ ಡೈರೆಕ್ಟ್​ ಟ್ಯಾಕ್ಸ್​ ಪ್ರಕಾರ, ಜೂನ್​ 30, 2022 ಅಥವಾ ಮೊದಲು ಪ್ಯಾನ್ ​ಅನ್ನು ಆಧಾರ್​ನೊಂದಿಗೆ ಲಿಂಕ್​ ಮಾಡಿದರೆ ರೂ.500 ದಂಡವನ್ನು ಪಾವತಿಸಬೇಕಾಗುತ್ತದೆ. ಜೂನ್​ 30ರೊಳಗೆ ಲಿಂಕ್​ ಮಾಡುವುದನ್ನು ತಪ್ಪಿಸಿಕೊಂಡರೆ, ರೂ. 1000 ದಂಡವನ್ನು ಪಾವತಿಸಬೇಕಾಗುತ್ತದೆ. ಈ ನಡುವೆಯೂ ಗಡುವನ್ನು ಮಾರ್ಚ್​ 31, 2023 ರವರೆಗೆ ವಿಸ್ತರಿಸಿರುವುದರಿಂದ ಸ್ವಲ್ಪ ಸಮಯಕಾಶ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...