alex Certify ಟ್ರಕ್ಕನ್ನು ರೈಲು ಎಂದು ಗ್ರಹಿಸಿದ ಟೆಸ್ಲಾ ಕಾರು: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್ಕನ್ನು ರೈಲು ಎಂದು ಗ್ರಹಿಸಿದ ಟೆಸ್ಲಾ ಕಾರು: ವಿಡಿಯೋ ವೈರಲ್​

ಚಲಿಸುತ್ತಿರುವ ಟ್ರಕ್‌ ಅನ್ನು ಟೆಸ್ಲಾ ಕಾರೊಂದು ರೈಲು​ ಎಂದು ಭಾವಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜೇಮ್ಸ್ ಅರ್ಬನಿಯಾಕ್ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ.

ಟ್ರಕ್‌ಗಳ ಗುಂಪನ್ನು ಟೆಸ್ಲಾ ಕಾರು ರೈಲು ಎಂದು ತಪ್ಪಾಗಿ ಗ್ರಹಿಸಿದೆ ಎಂದು ಅವರು ಹೇಳಿದ್ದಾರೆ. ಟೆಸ್ಲಾ ಕಂಪೆನಿಯ ನ್ಯಾವಿಗೇಷನ್ ಸಿಸ್ಟಮ್‌ನಲ್ಲಿನ ಈ ದೋಷವಾಗಿದೆ ಎಂದಿರುವ ಅವರು, ವಿಡಿಯೋದಲ್ಲಿ ಅದರ ಹೈಲೈಟ್​ ಮಾಡಿದ್ದಾರೆ.

ವಿಡಿಯೋದಲ್ಲಿ, ಟೆಸ್ಲಾ ಕಾರು ರೈಲು ಹಾದುಹೋಗಲು ಲೆವೆಲ್ ಕ್ರಾಸಿಂಗ್‌ನಲ್ಲಿ ಕಾಯುತ್ತಿರುವುದನ್ನು ಕಾಣಬಹುದು. ಆದರೆ ಕಾರು ಅಲ್ಲಿ ಚಲಿಸುತ್ತಿರುವುದು ಟ್ರಕ್​ಗಳು ಎಂದು ಗ್ರಹಿಸುವ ಬದಲು ರೈಲು ಎಂದು ತಪ್ಪಾಗಿ ತಿಳಿದಿರುವ ಕುರಿತು ಬಳಕೆದಾರರು ಬರೆದುಕೊಂಡಿದ್ದಾರೆ.

ನಾನು ವಾರಾಂತ್ಯದಲ್ಲಿ ಪಟ್ಟಣದಿಂದ ಹೊರಗೆ ಹೋಗಿದ್ದೆ. ಟೆಸ್ಲಾ ನನಗೆ ಅತ್ಯಂತ ಆನಂದ ನೀಡಿದೆ. ಆದರೆ ಟ್ರಕ್​ ಅನ್ನು ರೈಲು ಎಂದು ಗ್ರಹಿಸಿದ್ದು ಮಾತ್ರ ತಮಾಷೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...