alex Certify ಏಕಕಾಲದಲ್ಲಿ ಭಾರದ 16 ಚೆಂಡು ಹಿಡಿದು ವಿಶ್ವದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಭಾರದ 16 ಚೆಂಡು ಹಿಡಿದು ವಿಶ್ವದಾಖಲೆ

Man Sets World Record for Holding 16 Bowling Balls Together at Once

ಒಬ್ಬ ವ್ಯಕ್ತಿ ತನ್ನ ಎರಡು ಕೈಯಲ್ಲಿ ಎಷ್ಟು ಚೆಂಡುಗಳನ್ನು ಹಿಡಿದುಕೊಳ್ಳಬಹುದು. ನಾಲ್ಕು ಅಥವಾ ಹೆಚ್ಚೆಂದರೆ ಐದು ಅದಕ್ಕಿಂತ ಜಾಸ್ತಿ ಹಿಡಿದುಕೊಳ್ಳುವುದು ಕಷ್ಟವೇ ಸರಿ. ಆದರೆ ಇಲ್ಲೊಬ್ಬ ಏಕಕಾಲದಲ್ಲಿ ಬರೋಬ್ಬರಿ 16 ಚೆಂಡುಗಳನ್ನು ಹಿಡಿದುಕೊಳ್ಳುವುದರ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಹೌದು, ಗಿನ್ನಿಸ್ ವಿಶ್ವ ದಾಖಲೆ ಮಾಡಲು ಅನೇಕ ಮಂದಿ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಉದ್ದನೆಯ ಉಗುರು, ತೂಕ ಎತ್ತುವುದು, ಅತ್ಯಂತ ದೊಡ್ಡದಾಗಿ ತಯಾರಿಸುವ ಖಾದ್ಯಗಳು ಹೀಗೆ ಹಲವಾರು ರೀತಿಯಲ್ಲಿ ಜನರು ವಿಶ್ವದಾಖಲೆ ಬರೆಯಲು ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಾರೆ.

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ನಾಗಾಲೋಟ: ಏಪ್ರಿಲ್​ನಲ್ಲಿ ದಾಖಲೆ ಮಟ್ಟದ ಚಂದಾದಾರರನ್ನ ಸಂಪಾದಿಸಿದ ಜಿಯೋ

ಹಾಗೆಯೇ, ಚಾಡ್ ಮೆಕ್ಲಿನ್ ಎನ್ನುವಾತ ಏಕಕಾಲದಲ್ಲಿ 16 ಚೆಂಡುಗಳನ್ನು ಹಿಡಿದು ಈ ಸಾಧನೆ ಮಾಡಿದ್ದಾರೆ. ಹಿಂದಿನ ದಾಖಲೆ ಮುರಿಯಲು ಚಾಡ್, 14ಕ್ಕಿಂತ ಹೆಚ್ಚಿನ ಚೆಂಡುಗಳನ್ನು 10 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಬೇಕಾಗಿತ್ತು. ಪ್ರತಿಯೊಂದು ಚೆಂಡೂ 2.7 ಕೆ.ಜಿ ತೂಕ ಹೊಂದಿದ್ದು, ಒಟ್ಟು 16 ಬಾಲ್ ಗಳನ್ನು ಹಿಡಿದುಕೊಳ್ಳುವಲ್ಲಿ ಇವರು ಯಶಸ್ವಿಯಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...