alex Certify ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ನಾಗಾಲೋಟ: ಏಪ್ರಿಲ್​ನಲ್ಲಿ ದಾಖಲೆ ಮಟ್ಟದ ಚಂದಾದಾರರನ್ನ ಸಂಪಾದಿಸಿದ ಜಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ನಾಗಾಲೋಟ: ಏಪ್ರಿಲ್​ನಲ್ಲಿ ದಾಖಲೆ ಮಟ್ಟದ ಚಂದಾದಾರರನ್ನ ಸಂಪಾದಿಸಿದ ಜಿಯೋ

ರಿಲಯನ್ಸ್ ಜಿಯೋ ಕಂಪನಿ ಏಪ್ರಿಲ್​ ತಿಂಗಳೊಂದರಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.68 ಲಕ್ಷಕ್ಕೂ ಅಧಿಕ ಹೊಸ ಚಂದಾದಾರರನ್ನ ಗಳಿಸಿದೆ. ಈ ಮೂಲಕ ಒಟ್ಟು 1.99 ಕೋಟಿ ಗ್ರಾಹಕರನ್ನ ರಿಲಯನ್ಸ್ ಜಿಯೋ ಸಂಪಾದಿಸಿದೆ.

ಇನ್ನೊಂದೆಡೆ ಏರ್​ಟೆಲ್​ ಹಾಗೂ ವೋಡಾಫೋನ್​​ ಕಂಪನಿಗಳು ಏಪ್ರಿಲ್​ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಗ್ರಾಹಕರನ್ನ ಕಳೆದುಕೊಂಡಿವೆ. ದೆಹಲಿಯಲ್ಲಿ 88,234 ಗ್ರಾಹಕರನ್ನ ಕಳೆದುಕೊಂಡ ಏರ್​ಟೆಲ್ ಚಂದಾದಾರರ ಸಂಖ್ಯೆ 1.63 ಕೋಟಿ ಆಗಿದೆ. ಅದೇ ರೀತಿ 86,331 ಗ್ರಾಹಕರನ್ನ ಕಳೆದುಕೊಂಡ ವೋಡಾಫೋನ್​ ರಾಷ್ಟ್ರ ರಾಜಧಾನಿಯಲ್ಲಿ 1.61 ಕೋಟಿ ಗ್ರಾಹಕರನ್ನ ಉಳಿಸಿಕೊಂಡಿದೆ.

ಕೇವಲ ದೆಹಲಿ ಮಾತ್ರವಲ್ಲದೇ ದೇಶಾದ್ಯಂತ ಏಪ್ರಿಲ್​ ತಿಂಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಸಂಪಾದಿಸಿದ ಟೆಲಿಕಾಂ ಸಂಸ್ಥೆ ಎಂಬ ಖ್ಯಾತಿ ಕೂಡ ಜಿಯೋಗೆ ದೊರಕಿದೆ. ಏಪ್ರಿಲ್​ ತಿಂಗಳೊಂದರಲ್ಲೇ 47.56 ಲಕ್ಷ ಮಂದಿ ಜಿಯೋ ಸಿಮ್​ ಖರೀದಿ ಮಾಡಿದ್ದಾರೆ.

ಭಾರತಿ ಏರ್​ಟೆಲ್​​ ಕಳೆದೊಂದು ತಿಂಗಳಲ್ಲಿ ದೇಶಾದ್ಯಂತ 5.17 ಕೋಟಿ ಗ್ರಾಹಕರನ್ನ ಸಂಪಾದಿಸುವ ಮೂಲಕ ಒಟ್ಟು ಚಂದಾದಾರರ ಸಂಖ್ಯೆ 35.29 ಕೋಟಿ ಆಗಿದೆ. ಅದೇ ರೀತಿ ವೋಡಾಫೋನ್​ ಐಡಿಯಾ ಕೂಡ 18.10 ಕೋಟಿ ಇದ್ದ ಚಂದಾದಾರರ ಸಂಖ್ಯೆಯನ್ನ 28.19 ಕೋಟಿಗೆ ಏರಿಕೆ ಮಾಡಿಕೊಂಡಿದೆ.

ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ ಸಂಸ್ಥೆ ಕೂಡ 13.05 ಲಕ್ಷ ಗ್ರಾಹಕರನ್ನ ಕಳೆದುಕೊಳ್ಳುವ ಮೂಲಕ 11.72 ಕೋಟಿ ಚಂದಾದಾರನ್ನ ಹೊಂದಿದೆ.
ಮಾರ್ಚ್​ ತಿಂಗಳಲ್ಲಿ 1180.96 ಮಿಲಿಯನ್​ ಇದ್ದ ಒಟ್ಟು ವೈರ್​ಲೆಸ್​ ಚಂದಾದಾರರ ಸಂಖ್ಯೆ ಏಪ್ರಿಲ್​ ಅಂತ್ಯದ ವೇಳೆಗೆ 1183.11 ಮಿಲಿಯನ್​​ರಷ್ಟಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...