alex Certify ದೇವರಂತೆ ಬಂದು ಮಗುವಿನ ರಕ್ಷಣೆ ಮಾಡಿದ ಯುವಕ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರಂತೆ ಬಂದು ಮಗುವಿನ ರಕ್ಷಣೆ ಮಾಡಿದ ಯುವಕ: ವಿಡಿಯೋ ವೈರಲ್​

ಅಪಘಾತಗಳೇ ಹಾಗೆ. ಮುನ್ಸೂಚನೆ ನೀಡದೇ ನಡೆದು ಬಿಡುತ್ತವೆ. ಜೀವ ಗಟ್ಟಿಯಿದ್ದವನು ಕೂದಲೆಳೆ ಅಂತರದಿಂದ ಪಾರಾದರೆ, ಸಾಯುವ ವೇಳೆ ಬಂದರೆ ಕಾರಣವೇ ಬೇಕಿರುವುದಿಲ್ಲ. ಈಗ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ಪುಟ್ಟ ಮಗು ಹೇಗೆ ಜೀವ ಉಳಿಸಿಕೊಂಡಿತು ಎಂದು ತೋರಿಸುತ್ತದೆ.

ಈ ವಿಡಿಯೋದಲ್ಲಿ ಕಿರಿದಾದ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ವ್ಯಕ್ತಿಯೊಬ್ಬ ನಿಧಾನವಾಗಿ ದಾಟುತ್ತಿರುವುದನ್ನು ನೋಡಬಹುದು. ಇದನ್ನು ನೋಡುತ್ತಿದ್ದರೆ, ಈತನಿಗೇ ಏನೋ ಅಪಾಯ ಆಗಲಿದೆ ಎಂದು ಎನ್ನಿಸುವುದು ಉಂಟು. ಆದರೆ ಅಸಲಿಗೆ ಆಗಿದ್ದೇ ಬೇರೆ.

ಅತ್ತ ಕಡೆಯಿಂದ ದಂಪತಿ ಬೈಕ್​ನಲ್ಲಿ ವೇಗವಾಗಿ ಬರುತ್ತಿದ್ದಾರೆ. ಆಗ ಪುಟ್ಟ ಮಗುವೊಂದು ಅಚಾನಕ್​ ಆಗಿ ರಸ್ತೆಯ ಮಧ್ಯೆ ಬಂದುಬಿಡುತ್ತದೆ.

ಬೈಕ್​ ಇರುವ ವೇಗದಲ್ಲಿ ಖಂಡಿತವಾಗಿಯೂ ಆ ಮಗು ಬದುಕಲು ಸಾಧ್ಯವಿರಲಿಲ್ಲ. ಆದರೆ ರಸ್ತೆಯನ್ನು ದಾಟುತ್ತಿರುವ ವ್ಯಕ್ತಿ ಸಿನಿಮೀಯ ರೀತಿಯಲ್ಲಿ ಬಂದು ಆ ಮಗುವನ್ನು ಎತ್ತಿ ತಿರುಗಿಸುತ್ತಾನೆ. ಮಗು ಬಚಾವಾಗುತ್ತದೆ. ದಂಪತಿ ಬೈಕ್​ನಿಂದ ಆಯತಪ್ಪಿ ಬೀಳುತ್ತಾರೆ.

ಕೂದಲೆಳೆ ಅಂತರದಿಂದ ಮಗು ಪಾರಾಗಿದ್ದು, ಆ ವ್ಯಕ್ತಿ ದೇವರ ರೂಪದಲ್ಲಿ ಮಗುವಿನ ರಕ್ಷಣೆ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...