alex Certify ಭೀಕರ ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳ ರಕ್ಷಿಸಿದ ಛಾಯಾಚಿತ್ರಕಾರ: ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೀಕರ ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳ ರಕ್ಷಿಸಿದ ಛಾಯಾಚಿತ್ರಕಾರ: ಶ್ಲಾಘನೆಗಳ ಮಹಾಪೂರ

ಒಮಾನ್‌: ಒಮಾನ್​ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗರನ್ನು ವ್ಯಕ್ತಿಯೊಬ್ಬರು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋವನ್ನು ಟ್ವಿಟರ್‌ನಲ್ಲಿ ಫಿಗೆನ್ ಎನ್ನುವವರು ಹಂಚಿಕೊಂಡಿದ್ದಾರೆ.

ವಿಡಿಯೋ ಈ ವರ್ಷದ ಆರಂಭದ್ದಾಗಿದ್ದು, ಪುನಃ ವೈರಲ್​ ಆಗಿದೆ. ಒಬ್ಬ ವ್ಯಕ್ತಿ ಮಕ್ಕಳನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ನೋಡಿದಾಗ ಈತ ಆ ಮಕ್ಕಳ ತಂದೆ ಎಂದೇ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.

ಆದರೆ ಅಸಲಿಗೆ ಆ ವ್ಯಕ್ತಿಗೂ ಮಕ್ಕಳಿಗೂ ಸಂಬಂಧವಿಲ್ಲ. ಛಾಯಾಗ್ರಾಹಕ ಅಲಿ ಬಿನ್ ನಾಸರ್ ಅಲ್-ವಾರ್ದಿ ಎಂಬ ವ್ಯಕ್ತಿ ದೇವರ ರೂಪದಲ್ಲಿ ಬಂದು ಯಾವುದೇ ಮಕ್ಕಳನ್ನು ಕಾಪಾಡಿದ್ದಾರೆ. ಇಲ್ಲವಾದಲ್ಲಿ ಭೀಕರ ನೀರಿನಲ್ಲಿ ಮಕ್ಕಳು ಮುಳುಗಿ ಹೋಗುತ್ತಿದ್ದು. ಆ ಮಕ್ಕಳಿಗಾಗಿ ಅಲಿಬಿನ್​ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು.

ವಿಡಿಯೋ ಇದುವರೆಗೆ 3.8 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ವ್ಯಕ್ತಿಗೆ ಸಲಾಂ ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...