alex Certify ಪಾಂಡಾವನ್ನ ಪುಟ್ಟ ಮಗುವಿನಂತೆ ಮಲಗಿಸಿದ ವ್ಯಕ್ತಿ: ವಿಡಿಯೋ ನೋಡಿ ವಾಹ್ ಅಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಂಡಾವನ್ನ ಪುಟ್ಟ ಮಗುವಿನಂತೆ ಮಲಗಿಸಿದ ವ್ಯಕ್ತಿ: ವಿಡಿಯೋ ನೋಡಿ ವಾಹ್ ಅಂದ ನೆಟ್ಟಿಗರು

ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇರುವ ಪ್ರೀತಿಯ ಬಾಂಧವ್ಯ ಅದ್ಭುತ. ಕೇವಲ, ಶ್ವಾನ, ಬೆಕ್ಕುಗಳಷ್ಟೆ ಅಲ್ಲ ಅನೇಕ ಪ್ರಾಣಿಗಳು ಮನುಷ್ಯರ ಜೊತೆ ಸುಲಭವಾಗಿ ಬೆರೆತು ಬಿಡುತ್ತೆ. ಅಂತಹ ಪ್ರಾಣಿಗಳಲ್ಲಿ ಪಾಂಡಾಗಳು ಕೂಡ ಒಂದು. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಒಂದನ್ನ ನೋಡಿ. ಇಲ್ಲಿ ವ್ಯಕ್ತಿಯೊಬ್ಬ ಪಾಂಡಾವನ್ನ ಚಿಕ್ಕ ಮಗುವಿನಂತೆ ಮಡಿಲಲ್ಲಿಟ್ಟುಕೊಂಡು, ಬಿಗಿದಪ್ಪಿ ಮಲಗಿಸೋಕೆ ಪ್ರಯತ್ನ ಮಾಡ್ತಿರೊದನ್ನ ನೋಡಬಹುದು.

ಬ್ಯುಟೆಂಗೆಬೀಡೆನ್ ಅನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ಧಾರೆ. ಇಲ್ಲಿ ಪಾಂಡಾ ಮಡಿಲಲ್ಲಿ ಮಲಗಿಸಿಕೊಂಡು ಕುಲುಕಿಸುತ್ತಾ ಮಲಗಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಅಲ್ಲೇ ಇದ್ದ ಅನೇಕರ ಬಳಿ ಒಂದೊಂದು ಪಾಂಡಾ ಇತ್ತು. ಅವರೆಲ್ಲ ಒಂದೊಂದು ಪಾಂಡಾ ಹಿಡಿದುಕೊಂಡು ಅವುಗಳ ಜೊತೆ ಆಟ ಆಡುತ್ತಿದ್ದರು. ಆ ದೃಶ್ಯ ನೋಡುವುದಕ್ಕೆನೇ ಅದ್ಭುತವಾಗಿತ್ತು.

ಈ ವಿಡಿಯೋ ಈಗ 8 ಮಿಲಿಯನ್ ವೀಕ್ಷಣೆಯನ್ನ ಪಡೆದಿದೆ. ಈ ವಿಡಿಯೋ ನೋಡಿ ಎಂಜಾಯ್ ಮಾಡಿ ಫನ್ನಿ ಫನ್ನಿ ಕಾಮೆಂಟ್​​ಗಳನ್ನ ಕೂಡಾ ಹಾಕುತ್ತಿದ್ದಾರೆ.

ಒಬ್ಬರು` ಈ ರೀತಿಯ ಕೆಲಸ ಸಿಕ್ಕರೆ ನಾನು ಖುಷಿಯಿಂದ ಮಾಡುತ್ತೇನೆ` ಅಂತ ಬರೆದುಕೊಂಡಿದ್ದಾರೆ. `ಇಂತಹ ಕೆಲಸ ಸಿಕ್ಕರೆ ನಾನು ಫ್ರೀ ಆಗಿ ಮಾಡ್ತೇನೆ` ಅಂತ ಇನ್ನೊಬ್ಬರು ಬರೆದಿದ್ದಾರೆ. ` ಈ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಧನ್ಯವಾದ` ಜೊತೆಗೆ `ನಾನು ಮಾಡ್ತಿರೋ ಕೆಲಸ ಬಿಟ್ಟು, ಈ ಕೆಲಸ ಮಾಡುವುದಕ್ಕೆ ಸಿದ್ಧ`ಅಂತ ಕೂಡಾ ನೆಟ್ಟಿಗರು ಕಾಮೆಂಟ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...