alex Certify 45 ವರ್ಷಗಳ ಬಳಿಕ ಕುಟುಂಬ ಕೂಡಿಕೊಂಡ ವೃದ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

45 ವರ್ಷಗಳ ಬಳಿಕ ಕುಟುಂಬ ಕೂಡಿಕೊಂಡ ವೃದ್ಧ

Man reunited with kin 45 years after air crash | India News - Times of India

ಕಳೆದ 45 ವರ್ಷಗಳಿಂದ ಕುಟುಂಬಸ್ಥರಿಂದ ದೂರ ಉಳಿದಿದ್ದ ಸಜ್ಜದ್ ತಂಗಲ್ (70) ಎಂಬ ವೃದ್ಧರನ್ನು ಮರಳಿ ಅವರ ಕುಟುಂಬವನ್ನು ಕೂಡಿಸಿದ್ದಾರೆ ನವಿ ಮುಂಬೈ ಬಳಿಯ ಪನ್ವೆಲ್‌ನ ಸಾಮಾಜಿಕ ಕಾರ್ಯಕರ್ತರು.

95 ಮಂದಿಯ ಜೀವ ತೆಗೆದುಕೊಂಡ ಅಕ್ಟೋಬರ್‌ 12, 1976ರಲ್ಲಿ ಮುಂಬೈಯಲ್ಲಿ ಘಟಿಸಿದ ಇಂಡಿಯನ್ ಏರ್‌ಲೈನ್ಸ್ ವಿಮಾನದ ಅಪಘಾತದಲ್ಲಿ ಕೂದಲೆಳೆಯಿಂದ ಪಾರಾಗಿದ್ದ ಸಜ್ಜದ್, ಅಂದಿನಿಂದ ಕೊಲ್ಲಂನಲ್ಲಿರುವ ತಮ್ಮ ಕುಟುಂಬಸ್ಥರಿಂದ ದೂರ ಉಳಿದಿದ್ದರು.

“70ರ ದಶಕದಲ್ಲಿ ದುಬೈ ಹಾಗೂ ಅಬುಧಾಬಿಯಲ್ಲಿ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ತಂಗಲ್, ಅಕ್ಟೋಬರ್‌ 1976ರಲ್ಲಿ ದಕ್ಷಿಣ ಭಾರತೀಯ ನಟಿ ರಾಣಿ ಚಂದ್ರ ಹಾಗೂ ಇತರರು ಇಂಥದ್ದೊಂದು ಕಾರ್ಯಕ್ರಮಕ್ಕೆ ದುಬೈಗೆ ತೆರಳಿದ್ದರು. ಅಬುಧಾಬಿಯಿಂದ ಬಾಂಬೆ ಮೂಲಕ ಮದ್ರಾಸ್‌ಗೆ ಮರಳುವ ವೇಳೆ, ಈ ಗುಂಪಿನೊಂದಿಗೆ ವಿಮಾನದಲ್ಲಿ ಬರದೇ ಇರಲು ನಿರ್ಧರಿಸಿದ ತಂಗಲ್, ಅಪಘಾತದಿಂದ ಪಾರಾಗಿದ್ದರು. ಚಂದ್ರ ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು” ಎಂದು ಇಲ್ಲಿನ ಸೋಷಿಯಲ್ ಇವಾಂಜಲಿಕಲ್ ಅಸೋಸಿಯೇಷನ್ ಫಾರ್‌ ಲವ್‌ (ಸೀಲ್‌) ಆಶ್ರಮದ ಪಾಸ್ಟರ್‌ ಕೆ ಎಂ ಫಿಲಿಪ್ ಹೇಳುತ್ತಾರೆ.

ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

ಅಪಘಾತದಲ್ಲಿ ತನ್ನ ಆಪ್ತ ಮಿತ್ರನನ್ನು ಕಳೆದುಕೊಂಡ ತಂಗಲ್ ಮಾನಸಿಕವಾಗಿ ಕುಸಿದು, ಮುಂಬೈಯಲ್ಲೇ ಉಳಿದುಕೊಂಡು ಬದುಕು ಸಾಗಿಸಲು ಸಿಕ್ಕ ಕೆಲಸಗಳನ್ನು ಮಾಡುತ್ತಾ ಕಾಲ ಕಳೆದಿದ್ದಾರೆ.

ಬಹಳ ದುರ್ಬಲವಾಗಿಬಿಟ್ಟಿದ್ದ ತಂಗಲ್ 2019ರಲ್ಲಿ ಈ ಶೆಲ್ಟರ್‌ ಹೋಂಗೆ ದಾಖಲಾಗಿದ್ದರು. ಇದೀಗ ತಮ್ಮ ಮಾನಸಿಕ ಯಾತನೆಯಿಂದ ನಿಧಾನವಾಗಿ ಹೊರಬಂದಿರುವ ತಂಗಲ್, ತಮ್ಮ ಬದುಕಿನ ಹಿಂದಿನ ಘಟನೆಗಳನ್ನು ಹೇಳಿಕೊಂಡಿದ್ದಾರೆ.

ಕೇರಳದ ಕೊಲ್ಲಂನ ಶಾಸ್ಥಾಮಕೊಟ್ಟಾದಲ್ಲಿರುವ ತಮ್ಮ ಕುಟುಂಬವನ್ನು ತಂಗಲ್ 91 ವರ್ಷ ವಯಸ್ಸಿನ ತಮ್ಮ ತಾಯಿ ಫಾತಿಮಾ ಬೀವಿ ಹಾಗೂ ಕಿರಿಯ ಸಹೋದರರು ಹಾಗೂ ಸಹೋದರಿಯರನ್ನು ಕೂಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...