alex Certify 47 ವರ್ಷದ ನಂತ್ರ ಮನೆಗೆ ಬಂದವನಿಗೆ ಇಬ್ಬರು ಪತ್ನಿಯರಿಂದ ಕಾದಿತ್ತು ಶಾಕ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

47 ವರ್ಷದ ನಂತ್ರ ಮನೆಗೆ ಬಂದವನಿಗೆ ಇಬ್ಬರು ಪತ್ನಿಯರಿಂದ ಕಾದಿತ್ತು ಶಾಕ್..!

ಜನರು ಕಾಲ ಬದಲಾದಂತೆ ಬದಲಾಗ್ತಾರೆ. ಕಳೆದು ಹೋದವರು ಎಷ್ಟೇ ಪ್ರೀತಿ ಪಾತ್ರರಾಗಿರಲಿ, ಸಮಯ ಕಳೆದಂತೆ ಜನರು ಅವರನ್ನು ಬಿಟ್ಟು ಬದುಕುವುದನ್ನು ಕಲಿಯುತ್ತಾರೆ. 37ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಇಬ್ಬರು ಪತ್ನಿಯನ್ನು ಹೊಂದಿದ್ದ ಪತಿ ಜೀವನದಲ್ಲಿ ಆತನ ತಪ್ಪು ಆತನಿಗೆ ಪಾಠ ಕಲಿಸಿದೆ.

ಘಟನೆ ಕೀನ್ಯಾದ ಕಕಮೇಗಾ ಕೌಂಟಿಯಲ್ಲಿ ನಡೆದಿದೆ. ಪೇಟರ್ ಆಯುಕಾ ಹೆಸರಿನ ವ್ಯಕ್ತಿಯೊಬ್ಬ 47 ವರ್ಷಗಳ ನಂತ್ರ ಮನೆಗೆ ವಾಪಸ್ ಆಗಿದ್ದಾನೆ. ಆಗ ಮನೆಯಲ್ಲಾದ ಬದಲಾವಣೆ ಅವನಿಗೆ ಶಾಕ್ ನೀಡಿದೆ. 37 ವರ್ಷದಲ್ಲಿದ್ದಾಗ ಆಯುಕಾ ಮನೆ ಬಿಟ್ಟು ಹೋಗಿದ್ದನಂತೆ. ಇಬ್ಬರು ಪತ್ನಿಯರು ಹಾಗೂ ಐದು ಮಕ್ಕಳನ್ನು ಆಯುಕಾ ಬಿಟ್ಟು ಹೋಗಿದ್ದ.

ಕುಟುಂಬಸ್ಥರು ದೂರು ಕೂಡ ನೀಡಿದ್ದರಂತೆ. ಆಯುಕಾ, ಕೆಲಸ ಹುಡುಕಲು ಹೋಗಿದ್ದಾನೆಂದು ಊರಿನವರು ಹೇಳಿದ್ದರಂತೆ. ಆಯುಕಾ, 1983, 1992, 1996ರಲ್ಲಿ ಊರಿಗೆ ಬಂದಿದ್ದನಂತೆ. ಆದ್ರೆ ಮನೆಗೆ ಹೋಗಲು ಆಗಿರಲಿಲ್ಲವಂತೆ. ತನ್ನ 84ನೇ ವಯಸ್ಸಿನಲ್ಲಿ ಮನೆಗೆ ವಾಪಸ್ ಆಗಿದ್ದಾನೆ.

ಆಯುಕಾ, ಇಷ್ಟು ದಿನ ಟಾಂಜಾನಿಯಾದಲ್ಲಿ ವಾಸವಾಗಿದ್ದನಂತೆ. ಅಲ್ಲಿ ಮಹಿಳೆಯೊಬ್ಬಳ ಪ್ರೀತಿಗೆ ಬಿದ್ದಿದ್ದ ಆಯುಕಾಗೆ ಒಂದು ಮಗುವಿದೆ. ಈಗ ಎಲ್ಲವನ್ನೂ ಬಿಟ್ಟು, ಪತ್ನಿಯರ ಜೊತೆ ವಾಸಿಸಲು ಊರಿಗೆ ಬಂದಿದ್ದನಂತೆ ಆಯುಕಾ. ಆದ್ರೆ ಆಯುಕಾ ಇಬ್ಬರು ಪತ್ನಿಯರು ಹೊಸ ಜೀವನ ಶುರು ಮಾಡಿದ್ದಾರೆ. ಇಬ್ಬರು ಬೇರೆ ಮದುವೆಯಾಗಿದ್ದಾರೆ. ಇದನ್ನು ನೋಡಿದ ಆಯುಕಾ ನಿರಾಶೆಗೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...