alex Certify ಕೆಲಸ ಬೋರ್‌ ಎನಿಸಿದ ಕಾರಣಕ್ಕೆ 3.5 ಕೋಟಿ ರೂ. ವೇತನದ ಉದ್ಯೋಗ ತೊರೆದ ಟೆಕ್ಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಬೋರ್‌ ಎನಿಸಿದ ಕಾರಣಕ್ಕೆ 3.5 ಕೋಟಿ ರೂ. ವೇತನದ ಉದ್ಯೋಗ ತೊರೆದ ಟೆಕ್ಕಿ….!

ತಾವು ಮಾಡುವ ಕೆಲಸದಲ್ಲಿ ಉತ್ಸಾಹ, ಲವಲವಿಕೆ ಇಲ್ಲ ಎಂಬ ಕಾರಣಕ್ಕೆ ಅಮೇರಿಕಾದಲ್ಲಿ ನೆಟ್‌ಫ್ಲಿಕ್ಸ್‌ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬೇಸರಗೊಂಡು ಕೆಲಸ ಬಿಟ್ಟಿದ್ದಾರೆ. ಅಂದಹಾಗೆ ಅವರು ವರ್ಷಕ್ಕೆ 3.5 ಕೋಟಿ ರೂ. ವೇತನ‌ ಪಡೆಯುತ್ತಿದ್ದರು !

ಮೈಕೆಲ್ ಲಿನ್ ಅಮೆಜಾನ್‌ನಲ್ಲಿ ತಮ್ಮ ಕೆಲಸವನ್ನು ತೊರೆದ ನಂತರ 2017 ರಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನೆಟ್‌ಫ್ಲಿಕ್ಸ್‌ಗೆ ಸೇರಿದ್ದರು.

“ಅಮೆಜಾನ್ ತೊರೆದು ನೆಟ್‌ಫ್ಲಿಕ್ಸ್‌ಗೆ ಸೇರಿದಾಗ ದೀರ್ಘ ಕಾಲದವರೆಗೆ ಇಲ್ಲಿ ಉಳಿಯುತ್ತೇನೆ ಎಂದು ನಾನು ಭಾವಿಸಿದ್ದೆ. ನಾನು ವರ್ಷಕ್ಕೆ $450,000 (ಸುಮಾರು 3.5 ಕೋಟಿ ರೂ.) ಗಳಿಸಿದ್ದೇನೆ, ಇತರ ಸೌಲಭ್ಯ, ಭತ್ಯೆ ಪಡೆದುಕೊಂಡಿದ್ದೆ ಎಂದು ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

ಈ ತೀರ್ಮಾನಕ್ಕೆ ನನ್ನ ಪೋಷಕರು ಮೊದಲು ಆಕ್ಷೇಪಿಸಿದ್ದರು. ಅವರಿಗೂ ಕಷ್ಟದ ವಿಷಯವಾಗಿತ್ತು. ನನ್ನ ಮೆಂಟರ್ ಕೂಡ ಆಕ್ಷೇಪಿಸಿದ. ಮುಂದಿನ ಕೆಲಸಕ್ಕೆ ಸೇರುವಾಗ ವೇತನವನ್ನು ಮಾತುಕತೆ ಮಾಡುವಾಗ ಹೆಚ್ಚಿನ ಸಂಬಳ ಕಳೆದುಕೊಳ್ಳುತ್ತೇನೆ ಎಂಬ ಕಾರಣದಿಂದ ನಾನು ಬೇರೆ ಕೆಲಸ ಸಿಗುವವರೆಗೂ ಬಿಡಬಾರದು ಎಂದು ಹೇಳಿದ್ದರು.

ಉತ್ತಮ ಸಂಬಳದ ಕೆಲಸ ತೊರೆಯಲು ನಿರ್ಧರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿನ್, ಕೋವಿಡ್‌ನಲ್ಲಾದ ಬೆಳವಣಿಗೆ ಬಗ್ಗೆ ವಿವರಿಸುತ್ತಾ, ನನ್ನ ಹೆಚ್ಚಿನ ಸಂಬಳವು ಹೆಚ್ಚು ಕೆಟ್ಟ ವ್ಯವಹಾರದಂತೆ ಭಾಸವಾಯಿತು. ನಾನು ನೆಟ್‌ಫ್ಲಿಕ್ಸ್‌ನಲ್ಲಿ ಕೆಲಸ ಪ್ರಾರಂಭಿಸಿದಾಗ ನಾನು ಹಣವನ್ನು ಸಂಪಾದಿಸುತ್ತಿದ್ದೆ ಮತ್ತು ನಿರಂತರವಾಗಿ ಹೊಸ ವಿಷಯ ಕಲಿಯುತ್ತಿದ್ದೆ. ಈಗ, ಪ್ರಸ್ತುತ ಕೇವಲ ಹಣವನ್ನು ಗಳಿಸುತ್ತಿದ್ದೆ, ಯಾವುದೇ ವೃತ್ತಿ ಪ್ರಗತಿಯಿಲ್ಲದೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...