alex Certify ಕ್ರಿಕೆಟ್ ಪಂದ್ಯದ ವೇಳೆ ಮನದನ್ನೆಗೆ ಪ್ರಪೋಸ್ ಮಾಡಿದ ಪ್ರೇಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪಂದ್ಯದ ವೇಳೆ ಮನದನ್ನೆಗೆ ಪ್ರಪೋಸ್ ಮಾಡಿದ ಪ್ರೇಮಿ

ಕ್ರಿಕೆಟ್ ಪಂದ್ಯಗಳ ನಡುವೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಪ್ರೇಮಿಗಳತ್ತ ಕ್ಯಾಮೆರಾಮನ್‌ಗಳ ದೃಷ್ಟಿ ಬಹಳ ನಾಜೂಕಾಗಿ ಬೀಳುವುದ ಸಹಜ.

ಇಂಥದ್ದೇ ನಿದರ್ಶನವೊಂದು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಟಿ20 ಪಂದ್ಯವೊಂದರ ವೇಳೆ ಜರುಗಿದೆ. ಪಾಕ್‌ನ ಮೊಹಮ್ಮದ್ ರಿಜ್ವಾನ್ ಹಾಗೂ ಫಕರ್‌ ಜ಼ಮಾನ್ ಬ್ಯಾಟ್ ಮಾಡುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡುತ್ತಿರುವ ದೃಶ್ಯವನ್ನು ಕ್ಯಾಮೆರಾಗಳು ಸೆರೆ ಹಿಡಿದು, ಲೈವ್‌ ಪ್ರಸಾರ ಮಾಡಿವೆ.

ಫಿಲ್‌ ತನ್ನ ಮನದನ್ನೆ ಮುಂದೆ ಮಂಡಿಯೂರಿ ಪ್ರಪೋಸ್ ಮಾಡುತ್ತಲೇ, ’ಡಿಸಿಶನ್ ಪೆಂಡಿಂಗ್’ ಎಂದು ಕ್ರೀಡಾಂಗಣದ ಬೃಹತ್‌ ಪರದೆ ಮೇಲೆ ಮೂಡಿದೆ. ಕೂಡಲೇ ’ಶೀ ಸೆಡ್ ಎಸ್‌!’ ಎಂದು ಪರದೆಯಲ್ಲಿ ಬರುತ್ತಲೇ ಸುತ್ತಲೂ ನೆರೆದಿದ್ದ ವೀಕ್ಷಕರಿಂದ ಭಾರೀ ಕರತಾಡನ ಮೂಡಿದೆ.

ಈ ವಿಡಿಯೋ ತುಣುಕನ್ನು ಇಂಗ್ಲೆಂಡ್ ಕ್ರಿಕೆಟ್‌ ತನ್ನ ಟ್ವೀಟರ್‌ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿಕೊಂಡಿದೆ.

— England Cricket (@englandcricket) July 21, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...