ಕೊರೊನಾದಿಂದಾಗಿ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಆದರೆ ಎಂತಹ ಡೆಡ್ಲಿ ವೈರಸ್ಗೂ ಪ್ರೇಮ ನಿವೇದನೆ ಮಾಡಿಕೊಳ್ಳೋದನ್ನ ತಪ್ಪಿಸೋಕೆ ಸಾಧ್ಯವಾಗಿಲ್ಲ.
ದಿ ಫ್ಯಾಮಿಲಿ ಮ್ಯಾನ್ ನ ’ಚೆಲ್ಲಮ್ ಸರ್’ ಮೀಮ್ ಬಳಸಿಕೊಂಡ ಯುಪಿ ಪೊಲೀಸ್
ಅದ್ದೂರಿಯಾಗಿ ಅಲ್ಲದೇ ಇದ್ದರೂ ಸಹ ಪ್ರೇಮಿಗಳು ಸಿಂಪಲ್ ಆಗಿಯೇ ತಮ್ಮ ಪ್ರೀತಿ ಪಾತ್ರರ ಜೊತೆ ಕಾಲ ಕಳೆಯುತ್ತಿದ್ದಾರೆ.
ಇದೇ ರೀತಿ ಅಮೆರಿಕದ ಸಿನ್ಸಿನ್ನಾಟಿ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಉಂಗುರವನ್ನ ನೀಡಿ ಪ್ರೇಮ ನಿವೇದನೆ ಮಾಡಿದ್ದಾನೆ. ಈ ಸುಂದರ ಕ್ಷಣವನ್ನ ಫೋಟೋದ ಮೂಲಕ ಸೆರೆ ಹಿಡಿಲಾಯಿತು. ಆದರೆ ಈ ಫೋಟೋ ನೋಡಿದಾಗ ಆ ಕ್ಷಣಕ್ಕೆ ಈ ಪ್ರೇಮಿಗಳು ಮಾತ್ರವಲ್ಲದೇ ಇನ್ನೊಂದು ಜೀವಿಯೂ ಸಾಕ್ಷಿಯಾಗಿದೆ ಅನ್ನೋದು ತಿಳಿದುಬಂದಿದೆ.
ಉದ್ಯೋಗಿಗಳಿಗೆ ತಿಳಿದಿರಲಿ ಪಿಎಫ್ ಕುರಿತ ಈ 5 ಮಾಹಿತಿ
ಈ ಫೋಟೋದಲ್ಲಿ ಯುವಕ ಮೊಣಕಾಲಲ್ಲಿ ನಿಂತು ಪ್ರೇಮ ನಿವೇದನೆ ಮಾಡುತ್ತಿದ್ದರೆ ಯುವತಿ ಆತನ ಎದುರು ನಿಂತಿದ್ದಾಳೆ. ಇವರಿಬ್ಬರ ಮಧ್ಯೆ ನೀರಾನೆಯೊಂದು ಇರೋದನ್ನ ನೀವು ಕಾಣಬಹುದಾಗಿದೆ. ಈ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು ನೆಟ್ಟಿಗರು ಇದಕ್ಕಿಂತ ವಿಶೇಷ ಪ್ರಪೋಸಲ್ ಇನ್ನೊಂದು ಇರಲಿಕ್ಕಿಲ್ಲ ಎಂದಿದ್ದಾರೆ.