alex Certify ಜಗನ್ನಾಥನ ಸನ್ನಿಧಿಯಲ್ಲಿ ಕೊಳಲು ಮಾರಾಟಗಾರ ನುಡಿಸಿದ ಕಚ್ಚಾ ಬಾದಾಮ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗನ್ನಾಥನ ಸನ್ನಿಧಿಯಲ್ಲಿ ಕೊಳಲು ಮಾರಾಟಗಾರ ನುಡಿಸಿದ ಕಚ್ಚಾ ಬಾದಾಮ್: ವಿಡಿಯೋ ವೈರಲ್

ಕಚ್ಚಾ ಬಾದಾಮ್, ಇಡೀ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಸಾಕಷ್ಟು ಜನಪ್ರಿಯವಾದ ಹಾಡಾಗಿದೆ. ಶೇಂಗಾಬೀಜ ಮಾರಾಟ ಮಾಡುವ ಬಡ ವ್ಯಾಪಾರಿ ಭುಬನ್ ಬಡ್ಯಾಕರ್ ಶೇಂಗಾಬೀಜವನ್ನು ಮಾರಾಟ ಮಾಡಲು ಜನರನ್ನು ಆಕರ್ಷಿಸುವ ಸಲುವಾಗಿ ತಾನೇ ಸಿದ್ಧಪಡಿಸಿ ತನ್ನದೇ ಶೈಲಿಯಲ್ಲಿ ಹಾಡಿದ ಈ ಹಾಡು ಒಂದು ರೀತಿಯಲ್ಲಿ ಸೆನ್ಸೇಷನ್ ಅನ್ನು ಸೃಷ್ಟಿ ಮಾಡಿತ್ತು.

ಲಕ್ಷಾಂತರ ಜನರು ಈ ಹಾಡಿಗೆ ಹೆಜ್ಜೆ ಹಾಕುತ್ತಾ ರೀಲ್ಸ್ ಮಾಡಿ, ಟಿಕ್ ಟಾಕ್ ಮಾಡಿ ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಿದ್ದಾರೆ.

ಇದೀಗ ಒಡಿಶಾದ ಯುವಕನೊಬ್ಬ ಕೊಳಲಿನ ಮೂಲಕ ಈ ಕಚ್ಚಾ ಬಾದಾಮ್ ಹಾಡನ್ನು ನುಡಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾನೆ.
ಕೊಳಲಿನಲ್ಲಿ ಕಚ್ಚಾ ಬಾದಾಮ್ ಹಾಡನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಸಾಕಷ್ಟು ವೈರಲ್ ಆಗಿದೆ.

ಮಹಿಳೆಯೊಬ್ಬಳನ್ನು ಕೊಡವಿ ನೆಲದಲ್ಲಿ ಉರುಳಾಡಿಸಿದ ಮರಿಯಾನೆ..! ವಿಡಿಯೋ ವೈರಲ್

ಒಡಿಶಾದ ಪುರಿ ಜಗನ್ನಾಥ ದೇವಾಲಯದ ಆವರಣದಲ್ಲಿ ಈ ಯುವಕ ಕೊಳಲಿನಲ್ಲಿ ಕಚ್ಚಾ ಬಾದಾಮ್ ಹಾಡನ್ನು ಹೇಳುತ್ತಾ ಎಲ್ಲರ ಮನಸನ್ನು ಗೆದ್ದಿದ್ದಾನೆ.
ಪಶ್ಚಿಮ ಬಂಗಾಳದ ಬೀರ್ ಭೂಮ್ ಜಿಲ್ಲೆಯ ಲಕ್ಷ್ಮಿನಾರಾಯಣಪುರ ಪಂಚಾಯತ್ ನ ಕುರುಲ್ಜುರಿ ಗ್ರಾಮದ ನಿವಾಸಿ ಭುಬನ್ ಬಡ್ಯಾಕರ್ ತನ್ನ ಸೈಕಲ್ ನಲ್ಲಿ ಬಡವರ ಬಾದಾಮಿ ಎನಿಸಿರುವ ಶೇಂಗಾಬೀಜವನ್ನು ಮಾರಾಟ ಮಾಡುತ್ತಾ ಈ ಹಾಡನ್ನು ಗುನುಗುನಿಸುತ್ತಿದ್ದುದು ನೆಟ್ಟಿಗರ ಕಣ್ಣಿಗೆ ಬಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯಗೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...