alex Certify ಪುಟಾಣಿ ಕಂದನ ಜತೆ ಅಪ್ಪನ ಭಯಾನಕ ಸ್ಟಂಟ್​: ವೈರಲ್​ ವಿಡಿಯೋ ನೋಡಿ ದಿಗಿಲುಗೊಂಡ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿ ಕಂದನ ಜತೆ ಅಪ್ಪನ ಭಯಾನಕ ಸ್ಟಂಟ್​: ವೈರಲ್​ ವಿಡಿಯೋ ನೋಡಿ ದಿಗಿಲುಗೊಂಡ ನೆಟ್ಟಿಗರು

ತಮ್ಮ ಮಕ್ಕಳೊಂದಿಗೆ ತಂದೆ ಭಾವನಾತ್ಮಕ ಸಂಬಂಧ ಹೊಂದಿರುವುದು ಎಲ್ಲರಿಗೂ ತಿಳಿದದ್ದೇ. ಮಕ್ಕಳಿಗೆ ಸ್ವಲ್ಪವೂ ತೊಂದರೆಯಾಗಬಾರದು ಎಂದು ಅಪ್ಪ-ಅಮ್ಮ ಎಷ್ಟೇ ಕಷ್ಟ ಬಂದರೂ ಅದನ್ನು ಹಿಂದೆ ಸರಿಸಿ ಮಕ್ಕಳನ್ನು ಕಾಪಾಡುತ್ತಾರೆ. ಆದರೆ ಇಲ್ಲೊಂದು ಭಯಾನಕ ವಿಡಿಯೋ ವೈರಲ್​ ಆಗಿದ್ದು, ಅದರಲ್ಲಿ ಅಪ್ಪನೊಬ್ಬ ತನ್ನ ಪುಟಾಣಿ ಮಗುವಿನ ಜತೆ ಅಪಾಯಕಾರಿ ಸ್ಟಂಟ್​ ಮಾಡಿದ್ದಾನೆ.

ಈ ವೈರಲ್​ ವಿಡಿಯೋದಲ್ಲಿ ತನ್ನ ಪುಟ್ಟ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟು ರಸ್ತೆಯ ನಡುವೆ ಸ್ಟಂಟ್​ ಮಾಡಿದ್ದಾನೆ. 32-ಸೆಕೆಂಡಿನ ಈ ವಿಡಿಯೋ ನೋಡಿದವರು ದಿಗ್ಭ್ರಮೆಗೆ ಒಳಗಾಗುವುದು ಖಂಡಿತ.

ಈ ವಿಡಿಯೋದಲ್ಲಿ ಮಗುವಿನ ತಂದೆ, ಮಗುವನ್ನು ಗಾಳಿಯಲ್ಲಿ ಎತ್ತರಕ್ಕೆ ಎಸೆಯುತ್ತಾನೆ. ನಂತರ ಮಗುವನ್ನು ಕ್ಯಾಚ್​ ಹಿಡಿಯುತ್ತಾನೆ. ನಂತರ ಮಗುವಿನ ಕಾಲನ್ನಷ್ಟೇ ಹಿಡಿದು ಮಗು ಆಕಾಶದಲ್ಲಿ ತೇಲಾಡುವಂತೆ ಮಾಡುತ್ತಾನೆ. ಮಗುವನ್ನು ಮೇಲೆ ಉಲ್ಟಾ ಎಸೆದು ಅದನ್ನು ಕ್ಯಾಚ್​ ಹಿಡಿಯುತ್ತಾನೆ.

ಅಪ್ಪನ ಈ ಆಟಕ್ಕೆ ಮಗು ಕೂಡ ಆರಾಮಾಗಿ ನಗುತ್ತಾ ಎಂಜಾಯ್​ ಮಾಡುವುದನ್ನು ನೋಡಬಹುದು. ಆದರೆ ನೋಡುಗರನ್ನು ಮಾತ್ರ ಇದು ಆತಂಕಕ್ಕೆ ತಳ್ಳುತ್ತದೆ. ದಯವಿಟ್ಟು ಯಾರೂ ಇಂಥ ಸಾಹಸ ಮಾಡಬೇಡಿ ಎಂದು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...