
ಆನ್‌ಲೈನ್ ಶಾಪಿಂಗ್ ಸೈಟ್ ಮಿಂತ್ರಾದಿಂದ ಫುಟ್‌ಬಾಲ್ ಸ್ಟಾಕಿಂಗ್ಸ್ ಅನ್ನು ವ್ಯಕ್ತಿಯೊಬ್ಬ ಆರ್ಡರ್ ಮಾಡಿದ್ದಾನೆ. ಆದರೆ, ಇದರ ಬದಲಿಗೆ ಮಹಿಳೆಯರ ಒಳಉಡುಪು ಪಾರ್ಸೆಲ್ ಬಂದಿರುವುದು ನೋಡಿ ಆತ ಆಘಾತಗೊಂಡಿದ್ದಾನೆ.
ಅಡುಗೆ ಪಾತ್ರೆಯಲ್ಲಿ ಕುಳಿತು ಕಲ್ಯಾಣ ಮಂಟಪಕ್ಕೆ ಹೋದ ವಧು – ವರ…!
ಇದರ ಫೋಟೋ ಕ್ಲಿಕ್ಕಿಸಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. @ಲೋಕಶ್ವಾಲದ ತಮ್ಮ ಟ್ವಿಟ್ಟರ್ ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಫುಟ್ಬಾಲ್ ಸ್ಟಾಕಿಂಗ್ಸ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಅಕ್ಟೋಬರ್ 12 ರಂದು ಟ್ರಯಂಫ್ ಹೆಸರಿನ ಬ್ರ್ಯಾಂಡ್ ನಿಂದ ಕಪ್ಪು ಬಣ್ಣದ ಮಹಿಳೆಯರ ಒಳಉಡುಪು ಬಂದಿರುವುದಾಗಿ ಹೇಳಿದ್ದಾರೆ.
ಇನ್ನು ಆಘಾತಕಾರಿ ಸಂಗತಿಯೆಂದರೆ ಉತ್ಪನ್ನವನ್ನು ಬದಲಿಸಲು ಕಂಪನಿಯು ನಿರಾಕರಿಸಿದೆ. “ಕ್ಷಮಿಸಿ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಮಿಂತ್ರಾ ಪ್ರತಿಕ್ರಿಯಿಸಿದೆ.
ಅಬ್ಬಬ್ಬಾ….! ಒಂದಲ್ಲ, ಎರಡಲ್ಲ….. ಬರೋಬ್ಬರಿ ಏಳು ಮಕ್ಕಳ ಹೆತ್ತ ಮಹಾತಾಯಿ….!
ಟ್ವೀಟ್ ನಲ್ಲಿ, ಅವರು ತಮ್ಮ ದೂರು ಮತ್ತು ಮಿಂತ್ರದ ಪ್ರತಿಕ್ರಿಯೆಯೊಂದಿಗೆ ಅವರು ಸ್ವೀಕರಿಸಿದ ಉತ್ಪನ್ನದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ, ಇದಕ್ಕೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ಈ ಪೋಸ್ಟ್ ಭಾರಿ ವೈರಲ್ ಆಗಿದೆ.