alex Certify ಈ ಕಾರಣಕ್ಕಾಗಿ ಗೌನ್​ ಧರಿಸಿ ಫೋಟೋ ತೆಗೆಸಿಕೊಂಡ ಪುರುಷ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕಾಗಿ ಗೌನ್​ ಧರಿಸಿ ಫೋಟೋ ತೆಗೆಸಿಕೊಂಡ ಪುರುಷ..!

ತನ್ನ ಮಾಜಿ ಗೆಳತಿಯ ಮದುವೆ ಗೌನ್​ನ್ನು ಮಾರಾಟ ಮಾಡಲು ನಿರ್ಧರಿಸಿದ ವ್ಯಕ್ತಿಯೊಬ್ಬ ಕೊನೆಯಲ್ಲಿ ತಾನೇ ಆ ಗೌನ್​ನ್ನು ಧರಿಸಿದ್ದಾನೆ. ಮೋರ್ಗನ್​ ಮ್ಯಾಕ್ಲಿಯೋಡ್ ಎಂಬಾತ ಹೇಗಾದರೂ ಮಾಡಿ ಆ ಗೌನ್​ನ್ನು ಮನೆಯಿಂದ ಸಾಗು ಹಾಕಲು ಯತ್ನಿಸಿದ್ದ. ಹೀಗಾಗಿ ಅದನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದ.

ಈ ಗೌನ್​ನ್ನು ಇಷ್ಟಪಟ್ಟ ಗ್ರಾಹಕಿಯೊಬ್ಬಳು ಇದು ಪುರುಷರ ಮೇಲೆ ಹೇಗೆ ಕಾಣುತ್ತದೆ ಎಂದು ನೋಡಬಯಸಿದ್ದಾಳೆ. ಮೋರ್ಗನ್​ ಗ್ರಾಹಕಿ ಜೊತೆ ಮಾಡಿರುವ ಚಾಟ್​ಗಳ ಸ್ಕ್ರೀನ್​ಶಾಟ್​ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದಾನೆ.

ಇದರಲ್ಲಿ ಆಕೆ, ಈ ಡ್ರೆಸ್​ನ್ನು ಯಾರಾದರೂ ಪುರುಷರು ಧರಿಸಿರುವ ಫೋಟೊ ಇದೆಯಾ..? ಅಥವಾ ನಿಮ್ಮ ಬಳಿ ಯಾರಾದರೂ ಮಾಡೆಲ್​ಗಳು ಇದ್ದಾರೆಯಾ..? ಅವರು ಈ ಗೌನ್​ನ್ನು ಹಾಕಿದರೆ ನಾನು ನೋಡಬಹುದು. ನನಗೆ ಇದರ ಬೆಲೆ ಇಷ್ಟವಾಗಿದೆ. ಹಾಗೂ ಗೌನ್​ ಕೂಡ ಇಷ್ಟವಾಗಿದೆ ಎಂದು ಹೇಳಿದ್ದಾಳೆ.

ಗಮನಿಸಿ: ಜಿಯೋ ಬಳಕೆದಾರರಿಗೆ ಸಿಗ್ತಿದೆ ಈ ಸೇವೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾರ್ಗನ್​, ನಾನು ಈ ಗೌನ್​ ಹಾಕಿದ್ದನ್ನ ನೀವು ನೋಡಬೇಕು ಎಂದು ಬಯಸಿದ್ದಲ್ಲಿ ನಾನು ಹಾಕುತ್ತೇನೆ. ಆದರೆ ನಾನು ಮೈ ತುಂಬಾ ಟ್ಯಾಟೂ ಹೊಂದಿದ್ದೇನೆ ಅಲ್ಲದೇ ನನ್ನದು ಕಟ್ಟುಮಸ್ತಾದ ದೇಹ. ಹೀಗಾಗಿ ನನಗೆ ಈ ಗೌನ್​ ಹೇಗೆ ಕಾಣುತ್ತೆ ಎಂಬ ಊಹೆ ಕೂಡ ನನಗಿಲ್ಲ ಎಂದು ಹೇಳಿದ್ದಾನೆ.

ಕೊರೊನಾ ಲಸಿಕೆ ಪಡೆಯುವುದಿಲ್ಲವೆಂದು ಹೇಳಿದ್ದ ಬಾಬಾ ರಾಮ್‌ ದೇವ್‌ ‌ʼಯೂ ಟರ್ನ್ʼ

ಆದರೂ ಕೂಡ ಮಹಿಳೆ ಈ ಗೌನ್​ನ್ನು ಆತನ ಮೇಲೆ ಪ್ರಯೋಗಿಸಲು ಆಸೆ ಪಟ್ಟಿದ್ದಾಳೆ. ಇದ್ದಾಕಾಗಿ ಮಾರ್ಗನ್​ ಆ ಗೌನ್​ನ್ನು ಧರಿಸಿರುವ ಫೋಟೋವನ್ನ ಶೇರ್​ ಮಾಡಿದ್ದಾನೆ. ಕೊನೆಗೆ ಈ ಗೌನ್​ನ್ನು ಆ ಮಹಿಳೆ ಖರೀದಿ ಮಾಡಿಲ್ಲ. ಆದರೆ ಮಾರ್ಗನ್​ರ ಈ ಫೋಟೋ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ಕೇಕ್​ನಂತೆ ಸೇಲ್​ ಆಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...