alex Certify ಗಮನಿಸಿ: ಜಿಯೋ ಬಳಕೆದಾರರಿಗೆ ಸಿಗ್ತಿದೆ ಈ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಜಿಯೋ ಬಳಕೆದಾರರಿಗೆ ಸಿಗ್ತಿದೆ ಈ ಸೇವೆ

ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಸೌಲಭ್ಯ ನೀಡ್ತಿದೆ. ಜಿಯೋ ಬಳಕೆದಾರರು ವಾಟ್ಸಾಪ್ ಮೂಲಕ ಮೊಬೈಲ್ ರಿಚಾರ್ಜ್ ಮಾಡಬಹುದಾಗಿದೆ. ಇದಲ್ಲದೆ ತಮ್ಮ ಹತ್ತಿರದ ಲಸಿಕಾ ಕೇಂದ್ರದಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯತೆ ಬಗ್ಗೆ ಮಾಹಿತಿ ಪಡೆಯಬಹುದು. ಜಿಯೋ ಈ ಸೇವೆಯನ್ನು ವಾಟ್ಸಾಪ್ ಚಾಟ್ ಬಾಟ್ ನ ಮೂಲಕ ಶುರು ಮಾಡಿದೆ.

ಈಗ ಜಿಯೋ ಬಳಕೆದಾರರು ಬಿಲ್‌ಗಳನ್ನು ಪಾವತಿಸಲು, ದೂರು ನೀಡಲು ಮತ್ತು ಚಾಟ್ ಬಾಟ್ ನ ಸೇವೆಗಳನ್ನು ವಾಟ್ಸಾಪ್ ನಲ್ಲಿ ಪಡೆಯಬಹುದು. ಕಂಪನಿಯ ಈ ಹೊಸ ಸೇವೆಯನ್ನು ಬಳಸಿಕೊಂಡು, ಬಳಕೆದಾರರು ಹೊಸ ಜಿಯೋ ಸಿಮ್ ಆರ್ಡರ್ ಮಾಡಬಹುದು. ಕಂಪನಿಯು ಜಿಯೋ ಸಿಮ್ ಸಪೋರ್ಟ್, ಜಿಯೋ ಫೈಬರ್, ಇಂಟರ್ನ್ಯಾಷನಲ್ ರೋಮಿಂಗ್ ಮತ್ತು ಜಿಯೋ ಮಾರ್ಟ್‌ಗೆ ಸಂಬಂಧಿಸಿದ ಸೇವೆಗಳನ್ನು ವಾಟ್ಸಾಪ್‌ನಲ್ಲಿ ನೀಡುತ್ತಿದೆ.

ಇ-ವ್ಯಾಲೆಟ್, ಯುಪಿಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಂತಹ ಪಾವತಿ ಆಯ್ಕೆಗಳಿಗಾಗಿ, ಜಿಯೋ ಬಳಕೆದಾರರು ಹಾಯ್ ಎಂದು ಟೈಪ್ ಮಾಡಿ 70007 ಗೆ ವಾಟ್ಸಾಪ್ ಕಳುಹಿಸಬೇಕು. ಸದ್ಯ ಕಂಪನಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಹೊಸ ವೈಶಿಷ್ಟ್ಯವನ್ನು ನೀಡುತ್ತಿದ್ದು, ಶೀಘ್ರದಲ್ಲೇ ಈ ಸೇವೆಯನ್ನು ಇತರ ಭಾಷೆಗಳಲ್ಲೂ ನೀಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...