alex Certify ನೀವು ಎಂದಾದ್ರೂ ಮಿರಿಂಡಾ ಗೋಲ್ಗಪ್ಪಾ ಟೇಸ್ಟ್ ಮಾಡಿದ್ದೀರಾ..? ವಿಡಿಯೋ ನೋಡಿದ್ರೆ ವಾಕರಿಕೆ ಬರುತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಎಂದಾದ್ರೂ ಮಿರಿಂಡಾ ಗೋಲ್ಗಪ್ಪಾ ಟೇಸ್ಟ್ ಮಾಡಿದ್ದೀರಾ..? ವಿಡಿಯೋ ನೋಡಿದ್ರೆ ವಾಕರಿಕೆ ಬರುತ್ತೆ

Man makes Mirinda golgappa in viral video from Jaipur. Internet is disgusted  - Trending News Newsಇತ್ತೀಚಿನ ದಿನಗಳಲ್ಲಿ ವಿಲಕ್ಷಣ ಖಾದ್ಯಗಳನ್ನು ತಯಾರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಫ್ಯಾಂಟಾ ಮ್ಯಾಗಿ, ಫೈರ್ ಮೊಮೊ ಮತ್ತು ಓರಿಯೊ ಪಕೋಡಾದಂತಹ ವಿಚಿತ್ರವಾದ ಖಾದ್ಯಗಳು ನೆಟ್ಟಿಗರ ಗಮನ ಸೆಳೆದಿವೆ. ಇದೀಗ, ಜೈಪುರದ ವ್ಯಕ್ತಿಯೊಬ್ಬರು ಮಿರಿಂಡಾ ಗೋಲ್ಗಪ್ಪಾ ತಯಾರಿಸಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಗೋಲ್ಗಪ್ಪಾ ಮಾರಾಟಗಾರ ಮಿರಿಂಡಾ ಬಾಟಲಿಯನ್ನು ಶೇಕ್ ಮಾಡಿ ದೊಡ್ಡ ಪಾತ್ರೆಗೆ ಹಾಕಿದ್ದಾನೆ. ನಂತರ ಗೋಲ್ಗಪ್ಪಾಗಳಿಗೆ ಆಲೂಗಡ್ಡೆಯನ್ನು ತುಂಬಿ, ಪಾನಿ ಬದಲಿಗೆ ಮಿರಿಂಡಾವನ್ನು ಹಾಕಿ ಕೊಡಲಾಗುತ್ತದೆ. ಮಿರಿಂಡಾ ಗೋಲ್ಗಾಪ್ಪಾ ತಿಂದ ವ್ಯಕ್ತಿ ಸಖತ್ ರುಚಿಯಾಗಿದೆ ಎಂದಿದ್ದಾನೆ.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ ವೈರಲ್ ಆಗಿದ್ದು, 3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ನೆಟ್ಟಿಗರು ಮಾತ್ರ ಈ ವಿಲಕ್ಷಣ ಸಂಯೋಜನೆಗೆ ಅಸಹ್ಯಪಟ್ಟಿದ್ದಾರೆ. ಕಾಮೆಂಟ್ ಬಾಕ್ಸ್ ನಲ್ಲಿ ತಮ್ಮ ಅಸಮಾಧಾನವನ್ನು ತೋರ್ಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...