alex Certify 20 ವರ್ಷಗಳಿಂದ ಗುಹೆಯಲ್ಲೇ ವಾಸಿಸುತ್ತಿದ್ದ ವ್ಯಕ್ತಿಗೂ ಕೋವಿಡ್‌ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷಗಳಿಂದ ಗುಹೆಯಲ್ಲೇ ವಾಸಿಸುತ್ತಿದ್ದ ವ್ಯಕ್ತಿಗೂ ಕೋವಿಡ್‌ ಲಸಿಕೆ

ಕಳೆದ 20 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿರುವ ದಕ್ಷಿಣ ಸರ್ಬಿಯಾದ ವ್ಯಕ್ತಿಯೊಬ್ಬರು ಕೋವಿಡ್ ಸೋಂಕಿನಿದ ಆಗುತ್ತಿರುವ ಅನಾಹುತಗಳ ಬಗ್ಗೆ ಅರಿಯುತ್ತಲೇ ಲಸಿಕೆ ಪಡೆದುಕೊಂಡಿದ್ದು ಬೇರೆಯವರಿಗೂ ಕೋವಿಡ್ ಲಸಿಕೆ ಪಡೆಯಲು ವಿನಂತಿಸಿಕೊಂಡಿದ್ದಾರೆ.

ಇಲ್ಲಿನ ಸ್ಟಾರಾ ಪ್ಲಾನಿನಾ ಬೆಟ್ಟದಲ್ಲಿ ವಾಸಿಸುವ ಪಾಂಟಾ ಪೆಟ್ರೋವಿಕ್ ಹೆಸರಿನ ಈ ವ್ಯಕ್ತಿ ತಮ್ಮ ಊರು ಪಿರೋಟ್‌ನಲ್ಲಿರುವ ಸೂಪರ್‌ ಮಾರ್ಕೆಟ್ ಒಂದಕ್ಕೆ ಅಪರೂಪಕ್ಕೆ ಭೇಟಿ ನೀಡಿದ ವೇಳೆ ಕೋವಿಡ್ ಬಗ್ಗೆ ಅರಿತುಕೊಂಡಿದ್ದಾರೆ.

ಮಹಿಳೆಯರು ಮೆಹಂದಿ ಹಾಕುವ ಹಿಂದಿದೆ ಈ ಪ್ರಮುಖ ಕಾರಣ

“ವೈರಸ್‌ ಯಾರನ್ನೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ನನ್ನ ಗುಹೆಗೂ ಬರಬಹುದು” ಎಂದು ಇಡೀ ಜೀವನವನ್ನೇ ಸಾಮಾಜಿಕ ಅಂತರದಲ್ಲಿ ಬದುಕುತ್ತಿರುವ ಪೆಟ್ರೋವಿಕ್ ತಿಳಿಸಿದ್ದಾರೆ.

“ನನಗೆ ನಗರದಲ್ಲಿ ಸ್ವಾತಂತ್ರ‍್ಯ ಇರಲಿಲ್ಲ. ಅಲ್ಲಿ ಯಾರಾದರೊಬ್ಬರು ನಿಮ್ಮ ಹಾದಿಗೆ ಅಡ್ಡಿಯಾಗುತ್ತಲೇ ಇರುತ್ತಾರೆ — ನೀವು ನಿಮ್ಮ ಮಡದಿಯೊಂದಿಗೆ, ಅಕ್ಕಪಕ್ಕದವರೊಂದಿಗೆ, ಪೊಲೀಸರೊಂದಿಗೆ ವಾದ ಮಾಡುತ್ತಿರುತ್ತೀರಿ. ಇಲ್ಲಿ ಯಾರೂ ನನಗೆ ಕಿರಿಕಿರಿ ಮಾಡುತ್ತಿಲ್ಲ” ಎಂದು ತಾವೇಕೆ ಹೀಗೆ ಏಕಾಂತದಲ್ಲಿ ಬದುಕುತ್ತಿದ್ದೇನೆ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ ಪೆಟ್ರೋವಿಕ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...