ಕಳೆದ 20 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿರುವ ದಕ್ಷಿಣ ಸರ್ಬಿಯಾದ ವ್ಯಕ್ತಿಯೊಬ್ಬರು ಕೋವಿಡ್ ಸೋಂಕಿನಿದ ಆಗುತ್ತಿರುವ ಅನಾಹುತಗಳ ಬಗ್ಗೆ ಅರಿಯುತ್ತಲೇ ಲಸಿಕೆ ಪಡೆದುಕೊಂಡಿದ್ದು ಬೇರೆಯವರಿಗೂ ಕೋವಿಡ್ ಲಸಿಕೆ ಪಡೆಯಲು ವಿನಂತಿಸಿಕೊಂಡಿದ್ದಾರೆ.
ಇಲ್ಲಿನ ಸ್ಟಾರಾ ಪ್ಲಾನಿನಾ ಬೆಟ್ಟದಲ್ಲಿ ವಾಸಿಸುವ ಪಾಂಟಾ ಪೆಟ್ರೋವಿಕ್ ಹೆಸರಿನ ಈ ವ್ಯಕ್ತಿ ತಮ್ಮ ಊರು ಪಿರೋಟ್‌ನಲ್ಲಿರುವ ಸೂಪರ್ ಮಾರ್ಕೆಟ್ ಒಂದಕ್ಕೆ ಅಪರೂಪಕ್ಕೆ ಭೇಟಿ ನೀಡಿದ ವೇಳೆ ಕೋವಿಡ್ ಬಗ್ಗೆ ಅರಿತುಕೊಂಡಿದ್ದಾರೆ.
ಮಹಿಳೆಯರು ಮೆಹಂದಿ ಹಾಕುವ ಹಿಂದಿದೆ ಈ ಪ್ರಮುಖ ಕಾರಣ
“ವೈರಸ್ ಯಾರನ್ನೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ನನ್ನ ಗುಹೆಗೂ ಬರಬಹುದು” ಎಂದು ಇಡೀ ಜೀವನವನ್ನೇ ಸಾಮಾಜಿಕ ಅಂತರದಲ್ಲಿ ಬದುಕುತ್ತಿರುವ ಪೆಟ್ರೋವಿಕ್ ತಿಳಿಸಿದ್ದಾರೆ.
“ನನಗೆ ನಗರದಲ್ಲಿ ಸ್ವಾತಂತ್ರ‍್ಯ ಇರಲಿಲ್ಲ. ಅಲ್ಲಿ ಯಾರಾದರೊಬ್ಬರು ನಿಮ್ಮ ಹಾದಿಗೆ ಅಡ್ಡಿಯಾಗುತ್ತಲೇ ಇರುತ್ತಾರೆ — ನೀವು ನಿಮ್ಮ ಮಡದಿಯೊಂದಿಗೆ, ಅಕ್ಕಪಕ್ಕದವರೊಂದಿಗೆ, ಪೊಲೀಸರೊಂದಿಗೆ ವಾದ ಮಾಡುತ್ತಿರುತ್ತೀರಿ. ಇಲ್ಲಿ ಯಾರೂ ನನಗೆ ಕಿರಿಕಿರಿ ಮಾಡುತ್ತಿಲ್ಲ” ಎಂದು ತಾವೇಕೆ ಹೀಗೆ ಏಕಾಂತದಲ್ಲಿ ಬದುಕುತ್ತಿದ್ದೇನೆ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ ಪೆಟ್ರೋವಿಕ್.