alex Certify ನಾಗರಹಾವಿಗೆ ಮುತ್ತುಕೊಟ್ಟ ‘ಸ್ನೇಕ್‌ ಮ್ಯಾನ್’: ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗರಹಾವಿಗೆ ಮುತ್ತುಕೊಟ್ಟ ‘ಸ್ನೇಕ್‌ ಮ್ಯಾನ್’: ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಹಾವು, ಅದರಲ್ಲಿಯೂ ನಾಗರಹಾವು ಎಂದರೆ ಕನಸಿನಲ್ಲಿಯೂ ಬೆಚ್ಚಿಬೀಳುವವರೇ ಹೆಚ್ಚು. ಅಂಥದ್ದರಲ್ಲಿ ಎದುರಿಗೇ ಹಾವು ಕಂಡುಬಿಟ್ಟರೆ ಕಥೆ ಬೇರೆ ಹೇಳಬೇಕಾಗಿಲ್ಲ. ಆದರೆ ಇಲ್ಲಿ ವೈರಲ್​ ಆಗಿರುವ ವಿಡಿಯೋ ನೋಡಿ ಜನರು ದಿಗ್ಭ್ರಮೆಗೊಂಡಿರುವುದು ಮಾತ್ರವಲ್ಲದೇ, ಹೌಹಾರಿ ಹೋಗಿದ್ದಾರೆ.

ಆಗಿದ್ದೇನೆಂದರೆ, ಈ ವೈರಲ್​ ವಿಡಿಯೋದಲ್ಲಿ ನಾಗರಹಾವಿಗೆ ವ್ಯಕ್ತಿಯೊಬ್ಬ ಮುತ್ತು ಕೊಡುವ ಸಾಹಸ ಮಾಡಿದ್ದಾನೆ‌ ! ಉರಗ ಪರಿಣಿತ ಸುರೇಶ್​ ಎಂಬುವವರು ನಾಗರಹಾವಿಗೆ ಮುತ್ತು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಚ್ಚಿಬೀಳಿಸುವ ಈ ವಿಡಿಯೋ ನೋಡಿರುವ ನೆಟ್ಟಿಗರು ಇವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

ಸೌರಭ್ ಜಾಧವ್ ಎನ್ನುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಉರಗ ಪರಿಣತನ ಹೆಸರು ವಾವಾ ಸುರೇಶ. ಇವರು ಕೇರಳ ಮೂಲದವರು. ಈ ತನಕ 38,000 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ, 190 ಹಾವುಗಳನ್ನು ರಕ್ಷಿಸಿದ್ದಾರೆ ಮತ್ತು 3,000ಕ್ಕೂ ಹೆಚ್ಚು ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ ಕೂಡ! ‘ಕೇರಳದ ಹಾವಿನ ಮನುಷ್ಯ’ ಎಂದೇ ಇವರು ಪ್ರಸಿದ್ಧರಾಗಿದ್ದಾರೆ.

ಈ ವಿಡಿಯೋ ಅನ್ನು 780 ಜನರು ಇಷ್ಟಪಟ್ಟಿದ್ದಾರೆ. ಇವರ ಧೈರ್ಯವನ್ನು ನೆಟ್ಟಿಗರು ಹೊಗಳಿದ್ದಾರೆ. ಕೆಲವರು ಇದು ಅಪಾಯಕಾರಿ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...