alex Certify ಮದುವೆ ದಿನ ವಧುವಿನ ಗೌನ್​ ಒಳಗಿದ್ದ ಯುವಕ…! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನ ವಧುವಿನ ಗೌನ್​ ಒಳಗಿದ್ದ ಯುವಕ…! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ಕಾರಣ

ವೆಡ್ಡಿಂಗ್​ ಪ್ಲಾನರ್​ಗಳ ಕೆಲಸವೇ ಮದುವೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳೋದು. ಇದೇ ವಿಚಾರವನ್ನ ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡ ಫಿಲಿಫೈನ್ಸ್​ನ ವೆಡ್ಡಿಂಗ್​ ಪ್ಲಾನರ್​ ಒಬ್ಬ ಗಾಳಿಯಲ್ಲಿ ವಧುವಿನ ಗೌನ್​ ಹಾರಬಾರದು ಎಂಬ ಕಾರಣಕ್ಕೆ ಗೌನ್​​ನ ಅಡಿಯಲ್ಲೇ ಅಡಗಿದ್ದಾನೆ.

ವಧುವಿನ ಗೌನ್​ ಸಿದ್ಧಪಡಿಸುವ ಕೆಲಸ ಮಾಡುವ ರೋಲ್​ ಲ್ಯುನೆಸ್ಸಾ ಎಂಬವರು ಗಾಳಿಯಿಂದ ವಧುವಿನ ಡ್ರೆಸ್​​ ಹಾರಬಾರದು ಎಂಬ ಕಾರಣಕ್ಕೆ ತಾನೇ ವಧುವಿನ ಗೌನ್‌ ಒಳಕ್ಕೆ ಹೊಕ್ಕಿ ಕುಳಿತಿದ್ದಾರೆ.

ಈ ಮದುವೆಯು ಜೂನ್​ 6ರಂದು ಫಿಲಿಫೈನ್ಸ್​​ನ ಲ್ಯೂ ಬೀಚ್​ ರೆಸಾರ್ಟ್​ನಲ್ಲಿ ಆಯೋಜನೆಗೊಂಡಿತ್ತು.

ಪೋಷಕರ ಜೊತೆ ವಧು ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕೆಯ ಗೌನ್​ ಗಾಳಿಯ ನಡುವೆಯೂ ತನ್ನಿಂದ ತಾನೇ ಸರಿ ಹೋಗುತ್ತಿರೋದನ್ನ ಕಾಣಬಹುದಾಗಿದೆ. ಆಕೆ ತನ್ನ ಜಾಗವನ್ನ ತಲುಪಿದ ತಕ್ಷಣ ಉಡುಪಿನ ಒಳಗಿಂದ ಈ ವ್ಯಕ್ತಿ ಹೊರಗೆ ಬರುತ್ತಾನೆ. ಅಲ್ಲಿ ನೆರೆದ ಅತಿಥಿಗಳು ಸಹ ಈ ಘಟನೆಯಿಂದ ಆಶ್ಚರ್ಯಕ್ಕೆ ಒಳಗಾದಂತೆ ಕಂಡುಬಂದಿಲ್ಲ. ಆದರೆ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...