alex Certify ಅಮ್ಮ ಕುಕ್ಕುತ್ತಿದ್ದರೂ ಹಂಸದ ಮರಿ ರಕ್ಷಿಸಿದ ಆಪತ್ಬಾಂಧವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮ ಕುಕ್ಕುತ್ತಿದ್ದರೂ ಹಂಸದ ಮರಿ ರಕ್ಷಿಸಿದ ಆಪತ್ಬಾಂಧವ

ಪ್ರಾಣಿ, ಪಕ್ಷಿಗಳ ಮೇಲೆ ಅಮಾನವೀಯ ವರ್ತನೆ ತೋರುವವರು ಒಂದೆಡೆಯಾದರೆ, ಅವುಗಳನ್ನು ಪ್ರೀತಿಯಿಂದ ನೋಡುವವರ ಇನ್ನೊಂದು ವರ್ಗವಿದೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ವಿಡಿಯೋ ಈಗ ವೈರಲ್‌ ಆಗಿದೆ.

2014 ರಲ್ಲಿ ಚಿತ್ರೀಕರಿಸಲಾಗಿದ್ದ ಈ ವಿಡಿಯೋ ಪುನಃ ವೈರಲ್‌ ಆಗಿದೆ. ಇದರಲ್ಲಿ ಬೇಲಿಯೊಳಗೆ ಕೆಟ್ಟದಾಗಿ ಸಿಲುಕಿಕೊಂಡ ಹಂಸದ ಮರಿಯನ್ನು ವ್ಯಕ್ತಿಯೊಬ್ಬ ಕಾಪಾಡುತ್ತಿರುವುದನ್ನು ನೋಡಬಹುದು.

ಆದರೆ ಆ ಮರಿಯ ತಾಯಿಗೆ ತನ್ನ ಮಗುವಿಗೆ ಏನೋ ಸಂಕಷ್ಟ ಎದುರಾಗಿದೆ ಎನ್ನುವುದು ಅಷ್ಟೇ ಗೊತ್ತು. ಆದರೆ ಈ ವ್ಯಕ್ತಿ ಅದನ್ನು ರಕ್ಷಿಸುತ್ತಿದ್ದಾನೆ ಎನ್ನುವ ಅರಿವು ಇಲ್ಲ. ಬೇಲಿಯಲ್ಲಿ ಸಿಲುಕಿಕೊಂಡಿರುವ ಮರಿ ನೋವಿನಿಂದ ಕಿರುಚುತ್ತಿದ್ದಾಗ ಈ ಅಮ್ಮ ಈ ವ್ಯಕ್ತಿಯೇ ಏನೋ ಮಾಡುತ್ತಿದ್ದಾನೆ ಎಂದು ಭಾವಿಸಿ ಆತನನ್ನು ಕುಕ್ಕಿ ಕುಕ್ಕಿ ಇಡುತ್ತಿದೆ.

ಆದರೆ ಸಂಯದ ಕಳೆದುಕೊಳ್ಳದ ವ್ಯಕ್ತಿ ಅಮ್ಮನನ್ನು ಆ ಕಡೆ ನೂಕುತ್ತಾ ಮರಿಯನ್ನು ರಕ್ಷಿಸಿ ಕೊನೆಗೆ ಅಮ್ಮನ ಬಳಿ ಬಿಡುವ ವಿಡಿಯೋ ಇದಾಗಿದೆ. ಈ ರಕ್ಷಕನಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...