alex Certify ಚೀಸ್​ ಬರ್ಗರ್​​​ನಂತೆ ಕಾಣುವ ವಿಚಿತ್ರ ಮೀನು ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀಸ್​ ಬರ್ಗರ್​​​ನಂತೆ ಕಾಣುವ ವಿಚಿತ್ರ ಮೀನು ಪತ್ತೆ…!

ಸಮುದ್ರದ ಆಳವನ್ನು ಬಗೆದಷ್ಟೂ ಲೆಕ್ಕವಿಲ್ಲದ ಕೌತುಕಗಳು ಕಾಣಸಿಗುತ್ತದೆ. ಅದರಲ್ಲೂ ಹೈಟೆಕ್​ ಕ್ಯಾಮರಾಗಳಲ್ಲಿ ಸುಂದರ ಸಮುದ್ರ ಜೀವಿಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಇದೇ ರೀತಿಯ ವಿಚಿತ್ರ ಜೀವಿಯೊಂದು ರಷ್ಯಾದಲ್ಲಿ ಮೀನುಗಾರನೊಬ್ಬನ ಬಲೆಗೆ ಬಂದು ಬಿದ್ದಿದೆ.

39 ವರ್ಷದ ರೋಮನ್​​ ಫೆಡರೋಟ್ಸವ್​ ಎಂಬ ಹೆಸರಿನ ಮೀನುಗಾರ ಈ ವಿಚಿತ್ರ ಮೀನೊಂದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೀನು ನೋಡೋಕೆ ಥೇಟ್​ ಹಲ್ಲಿರುವ ಚೀಸ್​ ಬರ್ಗರ್​ನಂತೆ ಕಾಣುತ್ತಿದೆ..! ಹಡಗಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆಯಲ್ಲಿ ಈ ವಿಚಿತ್ರ ಮೀನು ರೋಮನ್​ ಕಣ್ಣಿಗೆ ಬಿದ್ದಿದೆ.

ಈ ವಿಚಿತ್ರ ಮೀನಿನ ಫೋಟೋವನ್ನು ರೋಮನ್​ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಈ ಮೀನಿನ ಫೋಟೋವನ್ನು ನೋಡಿದ ನೆಟ್ಟಿಗರು ಇದು ಥೇಟ್​ ಚೀಸ್​ ಬರ್ಗರ್​​ಗೆ ಹಲ್ಲು ಬಂದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನೇಕರು ಇದನ್ನು ಚಿಕನ್​ ಸ್ಯಾಂಡ್​ವಿಚ್​ ಅಂತಾ ಕೂಡ ಕರೆದಿದ್ದಾರೆ.

ಈ ಮೀನಿನ ಹೆಸರು ಅಥವಾ ಇದು ಯಾವ ಜಾತಿಗೆ ಸೇರಿದ್ದು ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಅಂದಹಾಗೆ ರೋಮನ್​ ಈ ರೀತಿ ವಿಚಿತ್ರ ಮೀನಿನ ಶೋಧ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಲಿಪ್​ಸ್ಟಿಕ್​ ಹಾಕಿದಂತೆ ಕಾಣುತ್ತಿದ್ದ ಮೀನೊಂದನ್ನೂ ಇವರು ಪತ್ತೆ ಮಾಡಿದ್ದರು. ಕಡು ಹಳದಿ ಕಣ್ಣಿನ ಮೀನು ಸೇರಿದಂತೆ ಚಿತ್ರ ವಿಚಿತ್ರ ಮೀನುಗಳನ್ನು ಶೋಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...