alex Certify ಈಜುಕೊಳಕ್ಕೆ ಬಿದ್ದರೂ ಕಾನ್ಫರೆನ್ಸ್ ಕಾಲ್‌ ಮುಂದುವರೆಸಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜುಕೊಳಕ್ಕೆ ಬಿದ್ದರೂ ಕಾನ್ಫರೆನ್ಸ್ ಕಾಲ್‌ ಮುಂದುವರೆಸಿದ ಭೂಪ

ಮನೆಯಿಂದ ಕೆಲಸ ಮಾಡುವ ವೇಳೆ ಎಂದೂ ಮುಗಿಯದಂತೆ ಕಾಣುವ ಆನ್ಲೈನ್ ಮೀಟಿಂಗ್‌ಗಳು ನಮಗೆ ಭಾರೀ ಬೋರಿಂಗ್ ಅನಿಸಿಬಿಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕೆಲಸದ ಕರೆಗಳನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ಪರಿಣಾಮ ಬಹಳ ಫನ್ನಿಯಾದ ಫಜೀತಿ ಮಾಡಿಕೊಂಡಿದ್ದಾರೆ.

ಈಜುಕೊಳದ ತುದಿಯಲ್ಲಿ ಓಡಾಡುವ ವೇಳೆ ಒಂದು ಕೈಯಲ್ಲಿ ತಮ್ಮ ಫೋನ್‌ ಅನ್ನು ಕಿವಿಗೆ ಇಟ್ಟುಕೊಂಡಿರುವ ಈತ ಮತ್ತೊಂದು ಕೈಯನ್ನು ಚಡ್ಡಿ ಜೇಬಿನಲ್ಲಿ ಇಟ್ಟುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಅಫ್ಘನ್ ತೊರೆದು ಬಂದ ಯುವಕನಿಂದ ಊಟದ ಬಗ್ಗೆ ದೂರು: ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ ನೆಟ್ಟಿಗರು

ನೋಡ ನೋಡುತ್ತಲೇ ಕೊಳದೊಳಗೆ ಬೀಳುವ ಈತ, ನೀರಿನಿಂದ ತನ್ನನ್ನು ತಾನು ರಕ್ಷಿಸಿಕೊಂಡು ಮೇಲೆದ್ದು ಹಾಗೆಯೇ ಕಾಲ್ ಮುಂದುವರೆಸಿದ್ದಾರೆ. ಕೊಳದಿಂದ ಮೇಲೆದ್ದ ಕೂಡಲೇ ಅದರ ತುದಿಯಲ್ಲಿ ಕುಳಿತು ಕಾನ್ಫರೆನ್ಸ್ ಕರೆಯಲ್ಲಿ ಮುಂದುವರೆದು ಬದ್ಧತೆಯ ಸಾಕಾರ ಮೂರ್ತಿಯಾಗಿದ್ದಾರೆ ಈ ವ್ಯಕ್ತಿ.

“ಕಾನ್ಫರೆನ್ಸ್ ಕರೆಯೊಂದರ ವೇಳೆ ಕಾಲುಜಾರಿದ ನನ್ನ ತಂದೆ ಕೊಳಕ್ಕೆ ಬಿದ್ದಿದ್ದಾರೆ” ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋವನ್ನು ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...