alex Certify ‘ಕೋವಿಡ್’ ಹೆಸರಿನಲ್ಲಿ ಸಾಲ ಪಡೆದು ಲಂಬೋರ್ಗಿನಿ ಖರೀದಿಸಿದ್ದ ಭೂಪ ಅಂದರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೋವಿಡ್’ ಹೆಸರಿನಲ್ಲಿ ಸಾಲ ಪಡೆದು ಲಂಬೋರ್ಗಿನಿ ಖರೀದಿಸಿದ್ದ ಭೂಪ ಅಂದರ್…!

ಕೋವಿಡ್ ಪರಿಹಾರ ಸಾಲದಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರು ಮತ್ತು ರೋಲೆಕ್ಸ್ ಖರೀದಿಸಿದಕ್ಕಾಗಿ ಯುಎಸ್ ನ ವ್ಯಕ್ತಿಯೊಬ್ಬರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಲೀ ಪ್ರೈಸ್ ಎಂಬಾತ ವಂಚನೆ ಮಾಡಿದಾತ. ಆತ ಕೋವಿಡ್ ಪರಿಹಾರ ಸಾಲದಲ್ಲಿ $ 1.6 ಮಿಲಿಯನ್ (ಸುಮಾರು 12 ಕೋಟಿ ರೂ.) ಹಣ ಪಡೆದು ಐಷಾರಾಮಿ ಕಾರು, ವಸ್ತುಗಳನ್ನು ಖರೀದಿಸಿದ್ದ.  30 ವರ್ಷದ ಲೀ ಪ್ರೈಸ್ ತನ್ನ ವ್ಯವಹಾರಕ್ಕೆ ನಿಧಿಯ ಅಗತ್ಯವಿದೆ ಎಂದು ಹೇಳಿ ಯುಎಸ್ ಸರ್ಕಾರದಿಂದ ದೊಡ್ಡ ಮೊತ್ತದ ಹಣವನ್ನು ಎರವಲು ಪಡೆದಿದ್ದ. ಈ ಹಣವನ್ನು ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಿದ್ದಾರೆ.

ಆದರೆ, ಐಷಾರಾಮಿ ಜೀವನವನ್ನು ಹೊಂದುವ ಈತನ ದೊಡ್ಡ ಯೋಜನೆ ತಲೆಕೆಳಗಾಗಿದೆ. ತಪಾಸಣೆ ವೇಳೆ ಪ್ರಿನ್ಸ್‌ನ ವಂಚನೆ ಬಟಾಬಯಲಾಗಿದ್ದು, ಕೋರ್ಟ್ 9 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ದಾಖಲೆಗಳು, ಪ್ರಿನ್ಸ್ ಹಣವನ್ನು ರೋಲೆಕ್ಸ್ ವಾಚ್, ಲಂಬೋರ್ಗಿನಿ ಕಾರು, ಫೋರ್ಡ್ ಎಫ್-350 ಹಾಗೂ ಇತರ ವಸ್ತುಗಳ ಮೇಲೆ ಖರ್ಚು ಮಾಡಿದ್ದನ್ನು ಬಹಿರಂಗಪಡಿಸಿದವು.

ವಂಚಕ ಲೀ ನಿಂದ ಸ್ವಾಧೀನಪಡಿಸಿಕೊಂಡಿರುವ ಒಟ್ಟು ಸಾಲದ ಮೊತ್ತದ $7,00,000 ಗಿಂತ ಹೆಚ್ಚಿನ ಮೊತ್ತವನ್ನು ಅಧಿಕಾರಿಗಳು ಈಗ ವಸೂಲಿ ಮಾಡಿದ್ದಾರೆ. ಇನ್ನು ಇದೇ ರೀತಿ ಹಲವು ಮಂದಿ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಟೆಕ್ಸಾಸ್‌ನ ವ್ಯಕ್ತಿಯೊಬ್ಬರು ಎಂಟು ಮನೆಗಳು ಮತ್ತು ಹಲವಾರು ಕಾರುಗಳನ್ನು ಖರೀದಿಸಲು $ 17 ಮಿಲಿಯನ್ ಪರಿಹಾರದ ಮೊತ್ತವನ್ನು ಪಡೆದಿರುವುದಾಗಿ ಆರೋಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...